ಕರ್ನಾಟಕ

karnataka

ETV Bharat / sports

ನಿವೃತ್ತಿ ಘೋಷಿಸಿದ ಅರ್ಜೆಂಟೀನಾ - ಬಾರ್ಸಿಲೋನಾ ತಂಡದ ಸ್ಟಾರ್​ ಆಟಗಾರ

ಅರ್ಜೆಂಟೀನಾದ ಚಾಂಪಿಯನ್‌ಶಿಪ್‌ನಲ್ಲಿ ಎಸ್ಟುಡಿಯಾಂಟೆಸ್ ಡೆ ಲಾ ಪ್ಲಾಟಾ ಕ್ಲಬ್ ತಂಡ, ಅರ್ಜೆಂಟೀನೋಸ್ ಜೂನಿಯರ್ಸ್ ವಿರುದ್ಧ 1-0 ಗೋಲುಗಳಿಂದ ಸೋತ ನಂತರ ಮಾಸ್ಚೆರಾನೊ ಭಾನುವಾರ ತನ್ನ ನಿವೃತ್ತಿ ಘೋಷಿಸಿದರು.

Messi, Neymar and Xavi hail retired Mascherano
ಜೇವಿಯರ್ ಮಸ್ಚೆರಾನೊ

By

Published : Nov 17, 2020, 2:09 PM IST

ಬ್ಯೂನಸ್:ಅರ್ಜೆಂಟೀನಾ ತಂಡದ ಮಾಜಿ ನಾಯಕ ಜೇವಿಯರ್ ಮಸ್ಚೆರಾನೊ ಸೋಮವಾರ ನಿವೃತ್ತಿ ಘೋಷಿಸಿದರು. ಲಿಯೋನೆಲ್ ಮೆಸ್ಸಿ ನಂತರ ಜೇವಿಯರ್ ಮಸ್ಚೆರಾನೊ ವಿದಾಯ ಘೋಷಿಸಿದ್ದು, ಅರ್ಜೆಂಟೀನಾ ಮತ್ತು ಬಾರ್ಸಿಲೋನಾ ತಂಡಕ್ಕೆ ಅಘಾತವನ್ನುಂಟುಮಾಡಿದೆ.

ಮೆಸ್ಸಿ ಮತ್ತು ಮಸ್ಚೆರಾನೊ ಜೊತೆಯಾಗಿ ಅರ್ಜೆಂಟೀನಾ ತಂಡದಲ್ಲಿ 16 ವರ್ಷ ಹಾಗೂ ಬಾರ್ಸಿಲೋನಾ ತಂಡಕ್ಕೆ ಒಂಬತ್ತು ವರ್ಷಗಳ ಕಾಲ ಆಡಿದ್ದರು. ಮಸ್ಚೆರಾನೊ ಫುಟ್ಬಾಲ್ ಇತಿಹಾಸದಲ್ಲಿ ಶ್ರೇಷ್ಠ ಟ್ಯಾಕ್ಲರ್​​ಗಳಲ್ಲಿ ಒಬ್ಬರು.

ಜೇವಿಯರ್ ಮಸ್ಚೆರಾನೊ

ಬ್ರೆಜಿಲ್​​ನಲ್ಲಿ ರನ್ನರ್ ಅಪ್ ಸ್ಥಾನ ಸೇರಿದಂತೆ ನಾಲ್ಕು ಫಿಫಾ ವಿಶ್ವಕಪ್​​ಗಳಲ್ಲಿ ಅರ್ಜೆಂಟೀನಾವನ್ನು ಪ್ರತಿನಿಧಿಸಿದರು. ಅರ್ಜೆಂಟೀನಾದ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಎಸ್ಟುಡಿಯಾಂಟೆಸ್ ಡೆ ಲಾ ಪ್ಲಾಟಾ ಕ್ಲಬ್, ಅರ್ಜೆಂಟೀನೋಸ್ ಜೂನಿಯರ್ಸ್ ವಿರುದ್ಧ 1-0 ಗೋಲುಗಳಿಂದ ಸೋತ ನಂತರ ಮಾಸ್ಚೆರಾನೊ ಭಾನುವಾರ ತನ್ನ ನಿವೃತ್ತಿ ಘೋಷಿಸಿದರು.

"ನನ್ನ ವೃತ್ತಿ ಜೀವನದ ಪ್ರತಿ ಹಂತದಲ್ಲೂ ನನಗೆ ಸಹಕರಿಸಿದ ಎಲ್ಲರಿಗೂ ಗೌರವದ ವಂದನೆಗಳು. ಈ ವೃತ್ತಿಜೀವನವನ್ನು ಕೊನೆಗೊಳಿಸಲು ಸಮಯವಾಗಿದೆ" ಎಂದು ರಕ್ಷಣಾತ್ಮಕ ಮಿಡ್‌ಫೀಲ್ಡರ್ ಮಾಸ್ಚೆರಾನೊ ತಮ್ಮ ನಿವೃತ್ತಿ ಘೋಷಿಸಿದ್ದಾರೆ.

ಮಸ್ಚೆರಾನೊ ತಮ್ಮ ವೃತ್ತಿಜೀವನದಲ್ಲಿ 2004 ಮತ್ತು 2008ರ ಒಲಿಂಪಿಕ್ ಚಿನ್ನದ ಪದಕಗಳನ್ನು ಒಳಗೊಂಡಂತೆ 21 ಪ್ರಮುಖ ಟ್ರೋಫಿಗಳನ್ನು ಗೆದ್ದಿದ್ದಾರೆ. ಬ್ರೆಜಿಲ್‌ನ ಕೊರಿಂಥಿಯಾನ್ಸ್, ವೆಸ್ಟ್ ಹ್ಯಾಮ್, ಲಿವರ್‌ಪೂಲ್, ಬಾರ್ಸಿಲೋನಾ ಮತ್ತು ಚೀನಾದ ಹೆಬೀ ಫಾರ್ಚೂನ್ ಪರ ಆಡಿದ್ದಾರೆ.

"ನಾವಿಬ್ಬರು ಒಟ್ಟಿಗೆ ಹಲವು ವರ್ಷಗಳಿಂದ ತಂಡ ಪ್ರತಿನಿಧಿಸಿದ್ದೇವೆ. ಅವರು ಈ ಸಮಯದಲ್ಲಿ ನಿವೃತ್ತಿ ಘೋಷಿಸಿದ್ದು, ಒಳ್ಳೆಯ ನಿರ್ಧಾರ ಎಂದು " ಮೆಸ್ಸಿ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ABOUT THE AUTHOR

...view details