ಗೋವಾ:ಇಂಡಿಯನ್ ಸೂಪರ್ ಲೀಗ್ನ ಶನಿವಾರದ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ವಿರುದ್ಧ ಈಸ್ಟ್ ಬೆಂಗಾಲ್ 1-0 ಅಂತರದಲ್ಲಿ ಗೆಲುವು ಸಾಧಿಸಿದೆ.
ಎರಡೂ ತಂಡಗಳೂ ತಮ್ಮ 10ನೇ ಪಂದ್ಯವನ್ನಾಡಿದ್ದು, ಬೆಂಗಳೂರು ತಂಡ ಟೂರ್ನಿಯಲ್ಲಿ 4ನೇ ಸೋಲು ಕಂಡರೆ, ಈಸ್ಟ್ ಬೆಂಗಾಲ್ ತನ್ನ 2ನೇ ಜಯ ದಾಖಲಿಸಿದೆ.

ಪಂದ್ಯದ 20ನೇ ನಿಮಿಷದಲ್ಲಿ ಈಸ್ಟ್ ಬೆಂಗಾಲ್ನ ವಿಲ್ಲೆ ಮ್ಯಾಟಿ ಸ್ಟೈನ್ಮನ್ ಗೋಲು ಸಿಡಿಸುವ ಮೂಲಕ ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದಲ್ಲಿ ಎರಡೂ ತಂಡಗಳಿಂದ ಯಾವುದೇ ಗೋಲು ಬಾರದಿದ್ದರಿಂದ ಈಸ್ಟ್ ಬೆಂಗಾಲ್ ಅಂತಿಮವಾಗಿ 1-0ಯಲ್ಲಿ ಬೆಂಗಳೂರು ಎಫ್ಸಿಯನ್ನು ಮಣಿಸಿತು.
ಬೆಂಗಳೂರು ಎಫ್‌ಸಿ ಆಡಿರುವ 10 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 3ರಲ್ಲಿ ಡ್ರಾ ಮತ್ತು 4ರಲ್ಲಿ ಸೋತಿದ್ದು 12 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.
9 ಪಂದ್ಯಗಳಲ್ಲಿ 22 ಅಂಕ ಹೊಂದಿರುವ ಮುಂಬೈ ಸಿಟಿ ಅಗ್ರಸ್ಥಾನದಲ್ಲಿದ್ದರೆ, ಎಟಿಕೆ ಮೋಹನ್ ಬಗಾನ್ 9 ಪಂದ್ಯಗಳಿಂದ 20 ಅಂಕಪಡೆದು 2ನೇ ಸ್ಥಾನದಲ್ಲಿ ಮುಂದುವರಿದಿವೆ.