ಪ್ಯಾರಿಸ್ :ಅರ್ಜೆಂಟೀನಾದ ಜನಪ್ರಿಯ ಸ್ಟ್ರೈಕರ್ ಲಿಯೋನಲ್ ಮೆಸ್ಸಿ 2021ರ ಬಲೋನ್ ಡಿ'ಓರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಪಿಎಸ್ಜಿ ಸ್ಟಾರ್ ವೃತ್ತಿ ಜೀವನದಲ್ಲಿ 7ನೇ ಬಾರಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ಯಾರೀಸ್ ಸೇಂಟ್ ಜರ್ಮೈನ್ ತಂಡದಲ್ಲಿ ಆಡುವ 34 ವರ್ಷದ ಮೆಸ್ಸಿ 2009, 2010, 2011, 2012, 2015, 2019 ಮತ್ತು 2021ರಲ್ಲಿ ಬಲೋನ್ ಡಿ'ಓರ್ ಪ್ರಶಸ್ತಿ ಪಡೆದಿದ್ದಾರೆ. ಅರ್ಜೆಂಟೀನಾಗೆ ಮೊದಲ ಬಾರಿ ಕೋಪಾ ಅಮೆರಿಕಾ ಪ್ರಶಸ್ತಿಯನ್ನು ತಂದುಕೊಟ್ಟಿದ್ದಕ್ಕೆ ಮೆಸ್ಸಿಗೆ ಈ ಪ್ರಶಸ್ತಿ ಸಂದಿದೆ.
7ನೇ ಬಾರಿ ಲಿಯೋನಲ್ ಮೆಸ್ಸಿ ಬಲೋನ್ ಡಿ'ಓರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು Ballon d'Or ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಘೋಷಿಸಿದೆ. ಬೇಯರ್ನ್ ಮ್ಯುನಿಚ್ ತಂಡದ ರಾಬರ್ಟ್ ಲೆವಾಂಡೋವ್ಸ್ಕಿ 2ನೇ ಮತ್ತು ಚೆಲ್ಸಿ ತಂಡದ ಜಾರ್ಗಿನೋ 3ನೇ ಸ್ಥಾನ ಪಡೆದು ರನ್ನರ್ ಅಪ್ ಆಗಿದ್ದಾರೆ.