ಸ್ಯಾನ್ ಸೆಬಾಸ್ಟಿಯನ್ [ಸ್ಪೇನ್]: ಬಾರ್ಸಿಲೋನಾದ ಸ್ಟಾರ್ ಪುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಮತ್ತೊಂದು ದಾಖಲೆ ಬರೆದಿದ್ದಾರೆ.
ಬಾರ್ಸಿಲೋನಾದ ಸ್ಟಾರ್ ಪುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ, ಮಾಜಿ ಆಟಗಾರ ಕ್ಸೇವಿಯನ್ನ ಹಿಂದಿಕ್ಕಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ದಾಖಲೆ ಮಾಡಿದ್ದಾರೆ. ಬಾರ್ಸಿಲೋನಾ ಪರ ಕ್ಸೇವಿ ಒಟ್ಟು 767 ಪಂದ್ಯಗಳನ್ನಾಡಿದ್ದು, ಲಿಯೋನೆಲ್ ಮೆಸ್ಸಿ 768 ಪಂದ್ಯಗಳನ್ನಾಡುವ ಮೂಲಕ ಈ ದಾಖಲೆ ಅಳಿಸಿ ಹಾಕಿದ್ದಾರೆ.
ಬಾರ್ಸಿಲೋನಾ ಪರ ಮತ್ತೊಂದು ದಾಖಲೆ ಬರೆದ ಮೆಸ್ಸಿ 1998ರಲ್ಲಿ ಬಾರ್ಸಿಲೋನಾ ತಂಡಕ್ಕೆ ಪಾದಾರ್ಪಣೆ ಮಾಡಿ 18 ವರ್ಷಗಳ ಸುದೀರ್ಘಾವಧಿಯ ಕಾಲ ಸೇವೆ ಸಲ್ಲಿಸಿರುವ ಕ್ಸೇವಿ, ಕ್ಲಬ್ ಪರ ಎಲ್ಲಾ ಟೂರ್ನಿಗಳನ್ನು ಒಳಗೊಂಡಂತೆ ಒಟ್ಟಾರೆ 505 ಪಂದ್ಯಗಳನ್ನಾಡಿದ್ದು 58 ಗೋಲು ಗಳಿಸಿದ್ದಾರೆ.
ಓದಿ : ಐಎಸ್ಎಲ್ ಪ್ರಶಸ್ತಿ ವಿಜೇತರು: ಹೀರೋ ಆಫ್ ದಿ ಲೀಗ್ ಪ್ರಶಸ್ತಿ ಪಡೆದ ರಾಯ್ ಕೃಷ್ಣ
ಇಲ್ಲಿಯವರೆಗೆ ಮೆಸ್ಸಿ 768 ಪಂದ್ಯಗಳನ್ನ ಆಡಿದ್ದು ಒಟ್ಟು ಆರು ವಿಭಿನ್ನ ಸ್ಪರ್ಧೆಗಳಲ್ಲಿ ಆಡಿದ್ದಾರೆ. ಲಾ ಲಿಗಾ ಬಾರ್ಸಿಲೋನಾ ಪರ ಮೆಸ್ಸಿ ಒಟ್ಟು 511 ಪಂದ್ಯಗಳನ್ನು ಆಡಿದ್ದಾರೆ. ಚಾಂಪಿಯನ್ಸ್ ಲೀಗ್‌ನಲ್ಲಿ 149 ಪಂದ್ಯ ಆಡಿದ್ದು, 79 ಕೋಪಾ ಡೆಲ್ ರೇನಲ್ಲಿ, ಸ್ಪ್ಯಾನಿಷ್ ಸೂಪರ್ ಕಪ್‌ನಲ್ಲಿ 20, ಕ್ಲಬ್ ವಿಶ್ವಕಪ್‌ನಲ್ಲಿ ಐದು ಮತ್ತು ಯುರೋಪಿಯನ್ ಸೂಪರ್ ಕಪ್‌ನಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ.