ಕ್ಯಾಂಪ್ ನೌ (ಸ್ಪೈನ್): ಅರ್ಜೆಂಟೀನಾ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಅಗಲಿದ ಫುಟ್ಬಾಲ್ ದಿಗ್ಗಜ ಮರಡೋನಾರಿಗೆ ಗೌರವ ಸಲ್ಲಿಸುವ ಭರದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ.
ಬಾರ್ಸಿಲೋನಾ-ಒಸಾಸುನಾ ವಿರುದ್ಧದ ಪಂದ್ಯದ ವೇಳೆ ಜರ್ಸಿ ಬಿಚ್ಚಿ ಮರಡೋನಾ ಜರ್ಸಿ ಪ್ರದರ್ಶಿಸಿದ ಹಿನ್ನೆಲೆ 720 ಡಾಲರ್ ದಂಡ ವಿಧಿಸಲಾಗಿದೆ ಎಂದು ಸ್ಪ್ಯಾನಿಷ್ ಫುಟ್ಬಾಲ್ ಫೇಡರೇಷನ್ ತಿಳಿಸಿದೆ.
ಭಾನುವಾರ ನಡೆದ ಸ್ಪ್ಯಾನಿಷ್ ಲೀಗ್‌ನ ಒಸಾಸುನಾ ವಿರುದ್ಧದ ಪಂದ್ಯದಲ್ಲಿ ಬಾರ್ಸಿಲೋನಾ 4-0 ಗೋಲುಗಳಿಂದ ಜಯಗಳಿಸಿದ ಬಳಿಕ ಮೆಸ್ಸಿ ತಮ್ಮ ಬಟ್ಟೆಯನ್ನು ತೆಗೆದು ಅಗಲಿದ ಮರಡೋನಾ ಬಟ್ಟೆಯನ್ನು ಪ್ರದರ್ಶಿಸಿದ್ದರು.
ಗೋಲು ಗಳಿಸಿದ ಬಳಿಕ ಬಾರ್ಸಿಲೋನಾದ ನೀಲಿ ಜರ್ಸಿಯನ್ನು ತೆಗೆದು ಒಳಗೆ ಹಾಕಿದ್ದ ಮರಡೋನಾರ ನಂಬರ್ 10 ಜೆರ್ಸಿಯನ್ನು ವೀಕ್ಷಕರತ್ತ ಪ್ರದರ್ಶಿಸಿದರು. ಅಲ್ಲದೆ ಆಕಾಶದ ಕಡೆ ತಮ್ಮ ಎರಡೂ ಕೈ ಎತ್ತಿ ಮರಡೋನಾಗೆ ಗೌರವ ಸಲ್ಲಿಸಿದ್ದರು. ಈ ಹಿನ್ನೆಲೆ ಫೆಡರೇಶನ್‌ನ ಸ್ಪರ್ಧಾ ಸಮಿತಿಯು ಅರ್ಜೆಂಟೀನಾದ ಆಟಗಾರನಿಗೆ ದಂಡ ವಿಧಿಸಿದೆ.
ಅಲ್ಲದೆ ಜರ್ಸಿ ತೆಗೆದಿದ್ದರಿಂದ ಹಳದಿ ಕಾರ್ಡ್ಗೆ ಒಳಗಾಗಿದ್ದ ಹಾಗೂ ಬಾರ್ಸಿಲೋನ ಹಾಕಿದ್ದ 216 ಡಾಲರ್ ದಂಡವನ್ನು ತಡೆಹಿಡಿಯಲು ಫೆಡರೇಷನ್ ನಿರಾಕರಿಸಿದೆ. ಆದರೆ ಕ್ಲಬ್ನ ಈ ನಿರ್ಧಾರ ಕುರಿತು ಮೆಸ್ಸಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ.