ಬಾರ್ಸಿಲೋನಾ (ಸ್ಪೇನ್): ಸೊಮವಾರ ರಿಯಲ್ ಮ್ಯಾಡ್ರಿಡ್ ಲಾ ಲಿಗಾದಲ್ಲಿ ಎಸ್ಪನ್ಯೋಲ್ ವಿರುದ್ಧ 1-0 ಗೋಲುಗಳಿಂದ ಜಯ ಸಾಧಿಸುವ ಮೂಲಕ ಎರಡು ಅಂಕ ಪಡೆದು ಲೀಗ್ನಲ್ಲಿ ಅಗ್ರಸ್ಥಾನಕ್ಕೇರಿತು.
ಎರಡೂ ಕ್ಲಬ್‌ಗಳು ಆಕ್ರಮಣಕಾರಿ ಅಟ ಪ್ರದರ್ಶಿಸಿದವು. ಪಂದ್ಯ ತೀವ್ರ ವೇಗದಲ್ಲಿ ಪ್ರಾರಂಭವಾಯಿತು, ಆದರೆ ಈ ಮೊದಲು ಮುನ್ನಡೆ ಸಿಕ್ಕಿದ್ದು ಆತಿಥೇಯ ತಂಡಕ್ಕೆ.
45 + 1ನೇ ನಿಮಿಷದಲ್ಲಿ ಕರೀಮ್ ಬೆನ್ಜೆಮಾ ಅವರು ನೀಡಿದ ಪಾಸ್ ಅನ್ನು ಕ್ಯಾಸೆಮಿರೊಗೆ ಅದ್ಭುತವಾದ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು.
ರಿಯಲ್ ಮ್ಯಾಡ್ರಿಡ್ ಎದುರಾಳಿ ತಂಡಕ್ಕೆ ಯಾವುದೇ ಅವಕಾಶ ನೀಡದೇ ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಶಿಸ್ತುಬದ್ಧವಾಗಿ ಆಡುವ ಮೂಲಕ ಕೊನೆಯವರೆಗೂ ತಮ್ಮ ಮುನ್ನಡೆಯನ್ನ ಚೆನ್ನಾಗಿ ನಿರ್ವಹಿಸಿತು.
ಪಂದ್ಯ ಪುನಾರಂಭವಾದ ನಾಲ್ಕು ನಿಮಿಷಗಳ ನಂತರ ಚೀನಾದ ಫಾರ್ವರ್ಡ್ ವು ಲೀ ಅವರು ಎಸ್ಪನ್ಯೋಲ್ಗೆ ಸಮ ಸಾಧಿಸುವ ಅವಕಾಶವನ್ನು ತಂದುಕೊಡಲು ಪ್ರಯತ್ನಿಸಿದರಾದರೂ, ಅವರ ಪ್ರಯತ್ನವನ್ನು ತಿಬಾಟ್ ಕೋರ್ಟೊಯಿಸ್ ಅವರು ವಿಪಲಗೊಳಿಸಿದರು ಮತ್ತು ಉಳಿದ ನಿಮಿಷಗಳಲ್ಲಿ ಎರಡೂ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ.
ಈ ಗೆಲುವಿನೊಂದಿಗೆ ರಿಯಲ್ ಮ್ಯಾಡ್ರಿಡ್ 71 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. 2 ಅಂಕ ಕಡಿಮೆ ಇರುವ ಬಾರ್ಸಿಲೋನಾ ಎರಡನೇ ಸ್ಥಾನ ಪಡೆದಿದೆ. ಲೀಗ್ನಲ್ಲಿ ಮೂರನೆ ನೇರ ಸೊಲುಕಂಡ ಎಸ್ಪನ್ಯೋಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಿತು.