ಸ್ಪೇನ್: ಕೊರೊನಾ ವೈರಸ್ ಭೀತಿಯಿಂದ ಪ್ರೇಕ್ಷಕರಿಲ್ಲದೆ ನಡೆದ ಲಾ ಲೀಗಾ ಫುಟ್ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾರ್ಸಿಲೋನಾ 2-0 ಗೋಲುಗಳಿಂದ ಲೆಗನೆಸ್ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.
ಕೊರೊನಾ ವೈರಸ್ ಭೀತಿಯಿಂದ ಸ್ಪ್ಯಾನಿಷ್ ಲೀಗ್ ಅನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಟೂರ್ನಿ ಪುನಾರಂಭಗೊಂಡಿದ್ದು 99,000 ಕುಳಿತು ನೋಡುವ ಸ್ಟೇಡಿಯಂನಲ್ಲಿ ಅಭಿಮಾನಿಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಲಿಯೋನೆಲ್ ಮೆಸ್ಸಿ ಹಾಗೂ ಅನ್ಶು ಫಾಟಿ ಸಿಡಿಸಿದ ಗೋಲುಗಳಿಂದ ಬಾರ್ಸಿಲೋನಾ ತನ್ನ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿದೆ.