ಮ್ಯಾಡ್ರಿಡ್:ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆಯೇ ಜೂನ್ 8ರಿಂದ ಲಾ ಲಿಗಾ ಫುಟ್‌ಬಾಲ್ ಲೀಗ್ ಪುನಾರಂಭಗೊಳ್ಳಲಿದೆ ಎಂದು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೇಜ್ ಪ್ರಕಟಿಸಿದ್ದಾರೆ.
ಈ ಹಿಂದೆ, ಲಾ ಲಿಗಾ ಮುಖ್ಯಸ್ಥ ಜೇವಿಯರ್ ಟೆಬಾಸ್ ಅವರು ಜೂನ್ 12ರಂದು ಸ್ಪೇನ್‌ನಲ್ಲಿ ಉನ್ನತ ವಿಮಾನ ಸೇವೆ ಪುನರಾರಂಭಗೊಳ್ಳುವ ಭರವಸೆ ಇದೆ ಎಂದಿದ್ದರು. ಆದಾಗ್ಯೂ, ಲಾ ಲಿಗಾ ಪುನಾರಂಭದ ದಿನಾಂಕವನ್ನು ಘೋಷಿಸಿರಲಿಲ್ಲ.
ಸ್ಪೇನ್ ಏನು ಮಾಡಬೇಕೋ ಅದನ್ನು ಮಾಡಿದೆ. ಈಗ ಎಲ್ಲರಿಗೂ ಹೊಸ ದಿನಗಳು ಪ್ರಾರಂಭವಾಗುತ್ತಿವೆ. ಅನೇಕ ದಿನನಿತ್ಯದ ಚಟುವಟಿಕೆಗಳನ್ನು ಮರಳಿ ಆರಂಭಿಸುವ ಸಮಯ ಬಂದಿದೆ. ಜೂನ್ 8ರಿಂದ, ಲಾ ಲಿಗಾ ಮತ್ತೆ ಪ್ರಾರಂಭವಾಗಲಿದೆ ಎಂದು ಪ್ರಧಾನಿ ಪೆಡ್ರೊ ಸ್ಯಾಂಚೇಜ್ ಹೇಳಿದ್ದಾರೆ.
ಈ ನಿರ್ಧಾರದಿಂದ ನಾವು ತುಂಬಾ ಸಂತಸಗೊಂಡಿದ್ದೇವೆ ಎಂದು ಲಾ ಲಿಗಾ ಮುಖ್ಯಸ್ಥ ಜೇವಿಯರ್ ಟೆಬಾಸ್ ಹೇಳಿದ್ದಾರೆ. ಇದು ಕ್ಲಬ್‌ಗಳು, ಆಟಗಾರರು, ತರಬೇತುದಾರರು,ರಾಷ್ಟ್ರೀಯ ಕ್ರೀಡಾ ಮಂಡಳಿ ಮತ್ತು ಏಜೆಂಟರ ಮಹತ್ತರ ಕೆಲಸದ ಫಲಿತಾಂಶವಾಗಿದೆ ಎಂದಿದ್ದಾರೆ.
ಆದರೆ ರಕ್ಷಣೆ ವಿಚಾರದಲ್ಲಿ ನಾವು ಕಡಿಮೆ ಮಾಡುವುದಿಲ್ಲ. ಮತ್ತೆ ಕೊರೊನಾ ಸೋಂಕು ಕಾಣಿಸಿಕೊಳ್ಳದಂತೆ ಮಾಡಲು ಆರೋಗ್ಯ ನಿಯಮಗಳನ್ನು ಪಾಲಿಸಲಾಗುವುದು ಎಂದಿದ್ದಾರೆ. ಇನ್ನು ಟೀಂ ಇಂಡಿಯಾದ ಸ್ಫೋಟಕ ದಾಂಡಿಗ ರೋಹಿತ್ ಶರ್ಮಾ ಸ್ಪೇನ್‌ನಲ್ಲಿ ನಡೆಯುವ ಪ್ರತಿಷ್ಠಿತ ಲಾ ಲಿಗಾ ಫುಟ್‌ಬಾಲ್ ಲೀಗ್ಗೆ ಭಾರತದಲ್ಲಿ ರಾಯಭಾರಿಯಾಗಿ ನೇಮಕವಾಗಿದ್ದಾರೆ.