ಟರಿನ್:ಕೊರೊನಾ ಸೋಂಕಿಗೆ ತುತ್ತಾಗಿದ್ದ ಸ್ಟಾರ್ ಫಾರ್ವಾರ್ಡ್ ಆಟಗಾರ ಪೌಲೊ ಡೈಬಾಲಾ ಹುಷಾರಾಗಿದ್ದಾರೆ ಎಂದು ಹಾಲಿ ಸಿರೀಸ್ ಎ ಚಾಂಪಿಯನ್ ಜುವೆಂಟಸ್ ತಿಳಿಸಿದೆ.
ಪ್ರೋಟೋಕಾಲ್ ಪ್ರಕಾರ, ಡೈಬಾಲಾ ಕೊರೊನಾ ಡಯಾಗ್ನಾಸ್ಟಿಕ್ ಟೆಸ್ಟ್ಗೆ ಒಳಾಗಾದ್ದರು. ಇದರಿಂದ ಎರಡು ಬಾರಿ ಕೊರೊನಾ ಚಿಕಿತ್ಸೆಗೆ ಒಳಗಾಗಿದ್ದರು. ಈಗಾಗಲೇ ಪರೀಕ್ಷೆಯಲ್ಲಿ ಫಲಿತಾಂಶ ನೆಗೆಟಿವ್ ಬಂದಿದೆ. ಆತ ಚೇತರಿಸಿಕೊಂಡಿದ್ದು, ಇನ್ಮುಂದೆ ಹೋಮ್ ಕ್ವಾರಂಟೈನ್ನಲ್ಲಿ ಪ್ರತ್ಯೇಕತೆಯಿಂದ ಇರುವ ಅಗತ್ಯವಿಲ್ಲ ಎಂದು ಜುವೆಂಟಸ್ ಫ್ರಾಂಚೈಸಿ ಪ್ರಕಟಣೆಯಲ್ಲಿ ತಿಳಿಸಿದೆ.
ವರದಿಗಳ ಪ್ರಕಾರ, 6 ವಾರಗಳ ಅವಧಿಯಲ್ಲಿ 4 ಬಾರಿ ಡೈಲಾಬಾ ಪರೀಕ್ಷಾ ಫಲಿತಾಂಶ ಪಾಸಿಟಿವ್ ಆಗಿ ಬಂದಿದ್ದು ಆಘಾತವನ್ನುಂಟು ಮಾಡಿತ್ತು.
ಅರ್ಜೆಂಟೈನಾದ ಡೈಬಾಲಾ ಅವರು ಮಾರ್ಚ್ನಲ್ಲಿ ತಂಡದ ಸಹಾ ಆಟಗಾರರಾದ ಡೇನಿಯಲ್ ರುಗಾನಿ ಹಾಗೂ ಬ್ಲೈಸ್ ಮ್ಯಾಟ್ಯೂಡಿರೊಂದಿಗೆ ಕೊರೊನಾ ಪಾಸಿಟಿವ್ಗೆ ತುತ್ತಾಗಿದ್ದರು. ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಿರುವ ಡೈಬಾಲಾ, ತಾವು ಮತ್ತು ತಮ್ಮ ಗರ್ಲ್ಫ್ರೆಂಡ್ ಆದ ಅರ್ಜೆಂಟೈನಾದ ಸಿಂಗರ್ ಒರಿಯಾನನ ಸಬಾಟಿನಿ ಇಬ್ಬರು ಕೋವಿಡ್ 19 ಚಿಕಿತ್ಸೆಗೆ ಒಳಗಾಗಿದ್ದೆವೆಂದು ಅವರು ಖಚಿತಪಡಿಸಿದ್ದಾರೆ.
ಈ ಕುರಿತು, ಡೈಬಾಲಾ ಬುಧವಾರ ತಮ್ಮ ಟ್ವಿಟರ್ನಲ್ಲಿ, ಕಳೆದ ವಾರಗಳಲ್ಲಿ ಅನೇಕ ಜನರು ನನ್ನ ಅರೋಗ್ಯದ ಬಗ್ಗೆ ಮಾತನಾಡಿದ್ದಾರೆ. ಆದರೆ ನಾನು ಗುಣಮುಖನಾಗಿದ್ದೇನೆ ಎಂದು ಅಂತಿಮವಾಗಿ ನಾನು ದೃಡೀಕರೀಸಬಕಲ್ಲೆ. ಇನ್ನು ಈ ವೈರಸ್ನಿಂದ ಬಳಲುತ್ತಿರುವ ಎಲ್ಲರಿಗೂ ನೀವು ಬೆಂಬಲಿಸುತ್ತೀರಾ ಎಂದು ನಾನು ಭಾವಿಸಿದ್ದೇನೆ, ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.