ಮಾರ್ಗೊ(ಗೋವಾ): ಶನಿವಾರ ನಡೆದ ಇಂಡಿಯನ್ ಸೂಪರ್ ಲೀಗ್ನ 7ನೇ ಆವೃತ್ತಿಯಲ್ಲಿ ಬಲಿಷ್ಠ ಎಟಿಕೆ ಮೋಹನ್ ಬಗಾನ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿದ ಮುಂಬೈಸಿಟಿ ಎಫ್ಸಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿದಿದೆ.
ಶನಿವಾರ ಟೂರ್ನಿ ಅಂತ್ಯಗೊಂಡಿದ್ದು, 7ನೇ ಆವೃತ್ತಿಯಲ್ಲಿ ವಿವಿಧ ಪ್ರಶಸ್ತಿಗೆ ಭಾಜನರಾದ ಆಟಗಾರರ ವಿವಿರ ಇಲ್ಲಿದೆ.
ಗೋಲ್ಡನ್ ಬೂಟ್-ಇಗೋರ್ ಅಂಗುಲಾ
ಎಫ್ಸಿ ಗೋವಾ ಪರ ಮೊದಲ ಆವೃತ್ತಿ ಆಡಿದ ಸ್ಪೇನಿನ ಇಗೋರ್ ಟೂರ್ನಿಯಲ್ಲಿ ನಿರ್ಣಾಯಕವಾದ 14 ಗೋಲು ಸಿಡಿಸಿದ್ದಾರೆ. ಇವರ ಅದ್ಭುತ ಆಟದ ನೆರವಿನಿಂದ ಗೋವಾ 6ನೇ ಬಾರಿ ಸೆಮಿಫೈನಲ್ ಪ್ರವೇಶಿಸಿತ್ತು. ಸ್ಪಾನೀಸ್ ಆಟಗಾರ ಈ ಪ್ರಶಸ್ತಿಗೆ ಫಿಜಿಯಾದ ರಾಯ್ ಕೃಷ್ಣ ಅವರಿಂದ ಭಾರಿ ಸ್ಪರ್ಧೆ ಎದುರಿಸಿದರು. ಕೃಷ್ಣ ಕೂಡ 14 ಗೋಲು ಗಳಿಸಿದರಾದರೂ ಇಗೋರ್ ಕಡಿಮೆ ಸಮಯ ತೆಗೆದುಕೊಂಡಿದ್ದರಿಂದ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಗೋಲ್ಡನ್ ಗ್ಲೌವ್- ಅರಿಂದಾಮ್ ಭಟ್ಟಾಚಾರ್ಯ
ಎಟಿಕೆ ಮೋಹನ್ ಬಗಾನ್ ತಂಡದ ಗೋಲ್ ಕೀಪರ್ ಅರಿಂದಾಮ್ ಭಟ್ಟಾಚಾರ್ಯ ಗೋಲ್ಡನ್ ಗ್ಲೌವ್ ಪ್ರಶಸ್ತಿ ಪಡೆದಿದ್ದಾರೆ. ಇವರು ಟೂರ್ನಿಯಲ್ಲಿ ಕಡಿಮೆ ಗೋಲ್ ಬಿಟ್ಟುಕೊಟ್ಟ ಗೋಲ್ ಕೀಪರ್ ಎನಿಸಿಕೊಂಡಿದ್ದಾರೆ. ಅವರು 19 ಗೋಲುಗಳನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ.