ಕರ್ನಾಟಕ

karnataka

ETV Bharat / sports

ಕೇರಳ ವಿರುದ್ಧ ಬೆಂಗಳೂರು ಎಫ್​ಸಿಗೆ ಜಯ: ಇಂಡಿಯನ್ ಸೂಪರ್​ ಲೀಗ್​ನ​ ಈ ವಾರದ ಹೈಲೈಟ್ಸ್! - ಬೆಂಗಳೂರು ಎಫ್​ಸಿ

ಇಂಡಿಯನ್ ಸೂಪರ್​ ಲೀಗ್​ ಟೂರ್ನಿಯಲ್ಲಿ ಈ ವಾರ ಹಲವು ರೋಚಕ ಪಂದ್ಯಗಳು ನಡೆದಿದ್ದು, ವಾರಾಂತ್ಯದಲ್ಲಿ ನಡೆದ ಹೈವೋಲ್ಟೇಜ್ ಕದನದಲ್ಲಿ ಬೆಂಗಳೂರು ಎಫ್​ಸಿ ಭರ್ಜರಿ ಜಯ ದಾಖಲಿಸಿದೆ.

ISL 7: Weekly Wrap-Up
ಇಂಡಿಯನ್ ಸೂಪರ್​ ಲೀಗ್​

By

Published : Dec 14, 2020, 5:01 PM IST

ಹೈದರಾಬಾದ್: ಇಂಡಿಯನ್ ಸೂಪರ್ ಲೀಗ್‌ನ ಈ ಸೀಸನ್​ನಲ್ಲಿ ಜಮಶೆಡ್ಪುರ ಎಫ್‌ಸಿ, ಎಟಿಕೆ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿದ್ದು, ಈ ಋತುವಿನಲ್ಲಿ ಮೊದಲ ಸೋಲುಣಿಸಿದೆ.

ಮಂಗಳವಾರ, ಲೂಯಿಸ್ ಮಚಾದೊ ಗಳಿಸಿದ ಎರಡು ಗೋಲುಗಳಿಂದ, ನಾರ್ತ್ ಈಸ್ಟ್ ಯುನೈಟೆಡ್ ತಂಡವು ಬೆಂಗಳೂರು ಎಫ್‌ಸಿ ವಿರುದ್ಧ 2-2 ಗೋಲುಗಳಿಂದ ಸಮಬಲ ಸಾಧಿಸಿತು.

ಇಂಡಿಯನ್ ಸೂಪರ್​ ಲೀಗ್​ನ​ ಈ ವಾರದ ಹೈಲೈಟ್ಸ್

ತಮ್ಮ ಮೊದಲ ಐಎಸ್‌ಎಲ್ ಸೀಸನ್​ನಲ್ಲಿ ಹ್ಯಾಟ್ರಿಕ್ ಸೋಲಿನಿಂದ ಹೊರಬಂದ ವೆಸ್ಟ್ ಬೆಂಗಾಲ್ ಎಫ್​​ಸಿ ತಂಡದ ಮೇಲೆ ಯಾವುದೇ ಒತ್ತಡವಿಲ್ಲ. ತಂಡವು ಗೆಲುವಿನ ಟ್ರ್ಯಾಕ್​ಗೆ ಮರಳಲಿದೆ ಎಂದು ಕೋಚ್ ಹೇಳಿದ್ದಾರೆ.

ವಾರದ ಮಧ್ಯದಲ್ಲಿ, ಚೆನ್ನೈಯಿನ್ ಎಫ್‌ಸಿ ವಿರುದ್ಧ 2-1 ಗೋಲುಗಳಿಂದ ಜಯ ಸಾಧಿಸುವ ಮೂಲಕ ಮುಂಬೈ ಸಿಟಿ ಎಫ್‌ಸಿ ಟೂರ್ನಿಯಲ್ಲಿ ತಮ್ಮ ನಾಲ್ಕನೇ ಗೆಲುವು ದಾಖಲಿಸಿತು.

ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ 4-2 ಅಂತರದ ಜಯ ಸಾಧಿಸಿದ ಬೆಂಗಳೂರು ಎಫ್‌ಸಿ ಮೂರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೇಲಕ್ಕೇರಿದೆ.

ABOUT THE AUTHOR

...view details