ಗೋವಾ:ಇಂದು ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಏಳನೇ ಸೀಸನ್ನ ನಾಲ್ಕನೇ ಪಂದ್ಯದಲ್ಲಿ, ಒಡಿಶಾ ಎಫ್‌ಸಿ ಬೊಂಬೋಲಿಮ್‌ನ ಜಿಎಂಸಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಹೈದರಾಬಾದ್ ಎಫ್‌ಸಿ ಎದುರಿಸಲಿದೆ.
ಈ ಋತುವಿನಲ್ಲಿ ಎರಡೂ ತಂಡಗಳು ಉತ್ತಮ ಆರಂಭಕ್ಕಾಗಿ ಎದುರು ನೋಡುತ್ತಿವೆ. ಕಳೆದ ಸೀಸನ್ನಲ್ಲಿ ಹೈದರಾಬಾದ್ 18 ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದಿದ್ದರೆ, 12 ಪಂದ್ಯಗಳಲ್ಲಿ ಸೋತಿತ್ತು. ಕಳಪೆ ರಕ್ಷಣೆಯಿಂದಾಗಿ ತಂಡವು 39 ಗೋಲುಗಳನ್ನು ಬಿಟ್ಟು ಕೊಟ್ಟಿತ್ತು. ಒಡಿಶಾ ಎಫ್‌ಸಿ ಕೂಡ 31 ಗೋಲುಗಳನ್ನು ಬಿಟ್ಟುಕೊಟ್ಟಿತ್ತು.
ಆದರೆ ಈ ಅಂಕಿ - ಅಂಶಗಳು ನಮ್ಮ ತಂಡಕ್ಕೆ ಕೇವಲ ಸಂಖ್ಯೆ ಮಾತ್ರ ಎಂದು ಒಡಿಶಾ ಎಫ್‌ಸಿ ತರಬೇತುದಾರ ಸ್ಟುವರ್ಟ್ ಬಾಕ್ಸ್ಟರ್ ಹೇಳಿದ್ದಾರೆ.
"ಅದು ಇತಿಹಾಸ ಮತ್ತು ಅದು ಯಾರಿಗೂ ಸಹಾಯ ಮಾಡುವುದಿಲ್ಲ. ಈಗ ಎರಡೂ ಹೊಸ ತಂಡಗಳಾಗಿವೆ. ಅವರು ಹೊಸ ಆಟಗಾರರನ್ನು ಪಡೆದಿದ್ದಾರೆ ಮತ್ತು ನಾವು ಸಹ ಹೊಸ ಆಟಗಾರರನ್ನು ಹೊಂದಿದ್ದೇವೆ. ಆದ್ದರಿಂದ ಎರಡೂ ತಂಡಗಳು ಬದಲಾಗಿವೆ. ನಾವು ಹೊಸ ಹೈದರಾಬಾದ್ ವಿರುದ್ಧ ಆಡಲಿದ್ದೇವೆ" ಎಂದು ಬಾಕ್ಸ್ಟರ್ ತಿಳಿಸಿದ್ದಾರೆ.
ಕಳೆದ ಸೀಸನ್ನಲ್ಲಿ ಹೈದರಾಬಾದ್ ಕೇವಲ ಎರಡು ಗೆಲುವುಗಳನ್ನು ದಾಖಲಿಸಿತ್ತು. ಕಳೆದ ಋತುವಿನಲ್ಲಿ ಆಡಿದ ಮೊದಲ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿತ್ತು.