ಮಾರ್ಗೋವಾ:ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಇತಿಹಾಸದಲ್ಲಿ ಆರು ಬಾರಿ ಪ್ಲೇಆಫ್ ಅರ್ಹತೆ ಸುತ್ತಿಗೆ ಪ್ರವೇಶಿಸಿದ ತಂಡವಾಗಿ ಎಫ್‌ಸಿ ಗೋವಾ ಖ್ಯಾತಿ ಗಳಿಸಿದೆ. ಇನ್ನು ಕಳೆದ ಬಾರಿ ನಡೆದಿದ್ದ ಪಂದ್ಯದಲ್ಲಿ ಎರಡು ಬಾರಿ ಪ್ರಶಸ್ತಿ ವಂಚಿತವಾಗಿತ್ತು. ಆದರೆ, ಈ ಬಾರಿ ಮಾತ್ರ ಐಎಸ್‌ಎಲ್ ಪ್ರಶಸ್ತಿ ಎತ್ತಿ ಹಿಡಿಯುವ ಸಾಧ್ಯತೆ ಇದೆ.
ಐಎಸ್ಎಲ್ 7: ಸೆಮಿಯಲ್ಲಿ ಮುಂಬೈ ಎದುರಿಸಲಿರುವ ಗೋವಾ ಎಫ್‌ಸಿ - ಎಫ್‌ಸಿ ಗೋವಾ 2021
ಇಂಡಿಯನ್ ಸೂಪರ್ ಲೀಗ್ ಪಂದ್ಯದ ಸೆಮಿಫೈನಲ್ ಆಟ ಶುಕ್ರವಾರ ಫತೋರ್ಡಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮುಂಬೈ ಸಿಟಿ ಎಫ್‌ಸಿಯನ್ನು ಎಫ್‌ಸಿ ಗೋವಾ ತಂಡ ಎದುರಿಸಲಿದೆ.
ಐಎಸ್ಎಲ್
ಇಂದು ಫತೋರ್ಡಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್‌ನ ಮೊದಲ ಹಂತದಲ್ಲಿ ಲೀಗ್ ಶೀಲ್ಡ್ ವಿಜೇತರಾದ ಮುಂಬೈ ಸಿಟಿ ಎಫ್‌ಸಿಯನ್ನು ಎಫ್‌ಸಿ ಗೋವಾ ತಂಡ ಎದುರಿಸಲಿದೆ. ಈ ಪಂದ್ಯದಲ್ಲಿ ಮುಂಬೈ ಮಣಿಸಿದರೆ, ಗೋವಾ ಫೈನಲ್ ಪ್ರವೇಶಿಸಲಿದೆ.
ಸತತ ನಾಲ್ಕನೇ ಬಾರಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆದಿರುವ ಗೋವಾ, ಈ ಬಾರಿ ತಮ್ಮ ಕನಸನ್ನು ಸಾಧಿಸುವ ವಿಶ್ವಾಸ ಹೊಂದಿದೆ. ಲೀಗ್‌ನ ಅತ್ಯಂತ ಮನರಂಜನೆಯ ತಂಡ ಎಂಬ ಖ್ಯಾತಿ ಪಡೆದಿದೆ.