ಕರ್ನಾಟಕ

karnataka

ETV Bharat / sports

ಈಸ್ಟ್​ ಬೆಂಗಾಲ್​ ವಿರುದ್ಧ 2-0 ಅಂತರದಲ್ಲಿ ಗೆದ್ದ ಮೋಗನ್ ಬಗಾನ್​ - ಕೋಲ್ಕತ್ತಾ ಡರ್ಬಿ

ಕೋಲ್ಕತ್ತಾ ಡರ್ಬಿ ಎಂದೇ ಬಿಂಬಿಸಲ್ಪಟ್ಟಿದ್ದ ಈ ಪಂದ್ಯದಲ್ಲಿ ರಾಯ್ ಕೃಷ್ಣ 49ನೇ ನಿಮಿಷ ಹಾಗೂ ಮನ್ವೀರ್ ಸಿಂಗ್ 84ನೇ ನಿಮಿಷದಲ್ಲಿ ಗೋಲು ಸಿಡಿಸಿ ಮೋಹನ್ ಬಗಾನ್​ಗೆ​ ಲೀಗ್​ನಲ್ಲಿ ಸತತ 2ನೇ ಜಯ ತಂದುಕೊಟ್ಟರು.

ಈಸ್ಟ್​ ಬೆಂಗಾಲ್​ ವಿರುದ್ಧ ಮೋಗನ್ ಬಗಾನ್ ಜಯ​
ಈಸ್ಟ್​ ಬೆಂಗಾಲ್​ ವಿರುದ್ಧ ಮೋಗನ್ ಬಗಾನ್ ಜಯ​

By

Published : Nov 28, 2020, 5:12 AM IST

ಗೋವಾ: ಶತಮಾನದ ಇತಿಹಾಸವಿರುವ ಈಸ್ಟ್​ ಬೆಂಗಾಲ್ ಮತ್ತು ಎಟಿಕೆ ಮೋಹನ್​ ಬಗಾನ್ ​ನಡುವೆ ನಡೆದ ಐಎಸ್​ಎಲ್​ 8 ಪಂದ್ಯದಲ್ಲಿ ದನದಲ್ಲಿ ಮೋಹನ್​ ಬಗಾನ್ 2-0ಯಲ್ಲಿ ಗೆದ್ದು ಬೀಗಿದೆ.

ಕೋಲ್ಕತ್ತಾ ಡರ್ಬಿ ಎಂದೇ ಬಿಂಬಿಸಲ್ಪಟ್ಟಿದ್ದ ಈ ಪಂದ್ಯದಲ್ಲಿ ರಾಯ್ ಕೃಷ್ಣ 49ನೇ ನಿಮಿಷ ಹಾಗೂ ಮನ್ವೀರ್ ಸಿಂಗ್ 84ನೇ ನಿಮಿಷದಲ್ಲಿ ಗೋಲು ಸಿಡಿಸಿ ಮೋಹನ್ ಬಗಾನ್​ಗೆ​ ಲೀಗ್​ನಲ್ಲಿ ಸತತ 2ನೇ ಜಯ ತಂದುಕೊಟ್ಟರು.

ಐಎಸ್​ಎಲ್​ನಲ್ಲಿ ಇದೇ ಮೊದಲ ಬಾರಿಗೆ ಸೇರ್ಪಡೆಗೊಂಡಿದ್ದರಿಂದ ಈ ಪಂದ್ಯ ಅಭಿಮಾನಿಗಳಲ್ಲಿ ರೋಚಕತೆ ತಂದಿತ್ತು. ಮೊದಲಾರ್ಧದಲ್ಲಿ ಎರಡೂ ತಂಡಗಳೂ ಉತ್ತಮ ಪ್ರದರ್ಶನ ತೋರಿದವು. ಆದರೆ ದ್ವಿತೀಯಾರ್ಧದಲ್ಲಿ ಮೋಹನ್ ಬಗಾನ್​ ಮೇಲುಗೈ ಸಾಧಿಸಿತು.

ABOUT THE AUTHOR

...view details