ಗೋವಾ: ಪೆನಾಲ್ಟಿ ಶೂಟೌಟ್ ಮೂಲಕ ಕ್ವೇಸಿ ಅಪ್ಪಯ್ಯ ಸಿಡಿಸಿದ ಏಕೈಕ ಗೋಲಿನ ನೆರವಿನಿಂದ ನಾರ್ತ್ಈಸ್ಟ್ ತಂಡ 1-0 ಗೋಲುಗಳಿಂದ ಮುಂಬೈ ಸಿಟಿ ಎಫ್ಸಿ ವಿರುದ್ಧ ಗೆಲುವು ಗಳಿಸಿದೆ.
ತಿಲಕ್ ಮೈದಾನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲಿ ರೆಡ್ ಕಾರ್ಡ್ ಪಡೆದಿದ್ದರಿಂದ 10 ಆಟಗಾರರೊಂದಿಗೆ ಆಡಿದ ಮುಂಬೈ ದ್ವಿತೀಯಾರ್ಧದಲ್ಲಿ ಕೆಟ್ಟ ಫಿನಿಶ್ ಮಾಡಿದ್ದರಿಂದ ಐಎಸ್ಎಲ್ನ 2ನೇ ಪಂದ್ಯದಲ್ಲಿ ಸೋಲುವಂತೆ ಮಾಡಿತು. ಅಹ್ಮದ್ ಜಹೌಹ್ ಅವರು ರೆಡ್ ಕಾರ್ಡ್ ಪಡೆದಿದ್ದರಿಂದ ಪಂದ್ಯದಿಂದ ಹೊರ ಹೋಗಿದ್ದರು.