ಹೈದರಾಬಾದ್: ಕೋವಿಡ್-19 ಲಾಕ್ಡೌನ್ ನಂತರ ಭಾರತದಲ್ಲಿ ಬೃಹತ್ ಟೂರ್ನಮೆಂಟ್ ಆಗಿ ಇಂಡಿಯನ್ ಸೂಪರ್ ಲೀಗ್ ನಾಳೆ(ಶುಕ್ರವಾರ) ಆರಂಭವಾಗುತ್ತಿದೆ. ಟೂರ್ನಿಯಲ್ಲಿ 2 ಹೊಸ ತಂಡಗಳು ಸೇರಿದಂತೆ ಒಟ್ಟು 11 ತಂಡಗಳು ಈ ಬಾರಿ ಕಣಕ್ಕಿಳಿಯುತ್ತಿವೆ.
ಶತಮಾನದ ಇತಿಹಾಸವಿರುವ ಈಸ್ಟ್ ಬೆಂಗಾಲ್ ಮತ್ತು ಮೋಹನ್ ಬಗಾನ್(ಎಟಿಕೆ ಮೋಹನ್ ಬಗಾನ್) ತಂಡಗಳು ಈ ಬಾರಿ ಐಎಸ್ಎಲ್ ಭಾಗವಾಗಲಿವೆ. ಈ ಬಾರಿ ಐಎಸ್ಎಲ್ ಹಿಂದಿನ ಲೀಗ್ಗಳಿಗಿಂತ ವಿಭಿನ್ನವಾಗಿರಲಿದೆ. ಏಕೆಂದರೆ ಕೋವಿಡ್ ಸಾಂಕ್ರಾಮಿಕ ರೋಗದ ಭೀತಿಯಿರುವುದರಿಂದ ಎಲ್ಲಾ ಪಂದ್ಯಗಳು ಗೋವಾದಲ್ಲಿ ನಡೆಯಲಿವೆ.
ಐಎಸ್ಎಲ್ನಲ್ಲಿ ಭಾಗವಹಿಸುವ ತಂಡಗಳು
- ಎಟಿಕೆ ಮೋಹನ್ ಬಗಾನ್
- ಬೆಂಗಳೂರು ಎಫ್ಸಿ
- ಚೆನ್ನೈಯಿನ್ ಎಫ್ಸಿ
- ಎಫ್ಸಿ ಗೋವಾ
- ಹೈದರಾಬಾದ್ ಎಫ್ಸಿ
- ಜಮ್ಶೆಡ್ಪುರ್ ಎಫ್ಸಿ
- ಕೇರಳ ಬ್ಲಾಸ್ಟರ್ಸ್ ಎಫ್ಸಿ
- ಮುಂಬೈ ಸಿಟಿ ಎಫ್ಸಿ
- ಒಡಿಶಾ ಎಫ್ಸಿ
- ನಾರ್ಥ್ ಈಸ್ಟ್ ಯುನೈಟೆಡ್ ಎಫ್ಸಿ
- ಎಸ್ಸಿ ಈಸ್ಟ್ ಬೆಂಗಾಲ್
ಟೂರ್ನಿ ನಡೆಯುವ ಸ್ಥಳಗಳು
ಟೂರ್ನಿಯ ಎಲ್ಲಾ ಪಂದ್ಯಗಳು 115 ಪಂದ್ಯಗಳು ಗೋವಾದ 3 ಮುಚ್ಚಿದ ಸ್ಟೇಡಿಯಂಗಳಲ್ಲಿ ನಡೆಯಲಿವೆ.
- ಜವಹಾರಲಾಲ್ ನೆಹರೂ ಸ್ಟೇಡಿಯಂ, ಫಟೋರ್ಡ
- ಜಿಎಂಸಿ ಅಥ್ಲೆಟಿಕ್ ಸ್ಟೇಡಿಯಂ, ಬ್ಯಾಂಬೊಲಿಮ್
- ತಿಲಕ್ ಮೈದಾನ್ ಸ್ಟೇಡಿಯಂ, ವಾಸ್ಕೋ
ಈ ಬಾರಿ ಕಳೆದ ಬಾರಿಗಿಂತ 20 ಪಂದ್ಯಗಳು(115) ಹೆಚ್ಚಾಗಿ ನಡೆಯಲಿವೆ. ಎಲ್ಲಾ ತಂಡಗಳು ಒಂದು ಎರಡು ಬಾರಿ ಮುಖಾಮುಖಿಯಾಗಲಿವೆ. ಅಂಕ ಪಟ್ಟಿಯ ಮೊದಲ ನಾಲ್ಕು ತಂಡಗಳು ಪ್ಲೇ ಆಫ್ ತಲುಪಲಿವೆ. ಗುಂಪು ಹಂತದಲ್ಲಿ ಗೆಲ್ಲುವ ತಂಡ ಎಫ್ಸಿ ಚಾಂಪಿಯನ್ಸ್ ಲೀಗ್ಗೆ ಅರ್ಹತೆ ಪಡೆಯಲಿದೆ.
ಪ್ರಶಸ್ತಿ ಮೊತ್ತ
- ಚಾಂಪಿಯನ್ಸ್ - 1.01 ಮಿಲಿಯನ್ ಯುಎಸ್ ಡಾಲರ್ (ಸುಮಾರು 8 ಕೋಟಿ ರೂ.)
- ರನ್ನರ್ಸ್ ಅಪ್ - 540,650 ಯುಎಸ್ ಡಾಲರ್ ( 4 ಕೋಟಿ ರೂ.)
- ಸೆಮಿ-ಫೈನಲ್ ತಂಡಗಳು - 202,500 ಯುಎಸ್ ಡಾಲರ್ (1.5 ಕೋಟಿ ರೂ.)
- ಅತಿ ಹೆಚ್ಚು ಗೋಲ್ - ಗೋಲ್ಡನ್ ಬೂಟ್ ಮತ್ತು 4,500 ಯುಎಸ್ ಡಾಲರ್ ( ₹ 3 ಲಕ್ಷ )
- ಅತ್ಯುತ್ತಮ ಗೋಲ್ ಕೀಪರ್- ಗೋಲ್ಡನ್ ಗ್ಲೌವ್ಸ್ ಮತ್ತು 4,500 ಯುಎಸ್ ಡಾಲರ್( ₹ 3 ಲಕ್ಷ)
- ಲೀಗ್ನ ಉದಯೋನ್ಮುಖ ಆಟಗಾರ - 3,400 ಯುಎಸ್ ಡಾಲರ್( ₹ 2.5 ಲಕ್ಷ)
- ಅತ್ಯುತ್ತಮ ಆಟಗಾರ - 6,800 ಯುಎಸ್ ಡಾಲರ್( ₹ 5 ಲಕ್ಷ)