ಗೋವಾ: ತಂಡದಲ್ಲಿ ಅಗತ್ಯ ಬದಲಾವಣೆ ಮಾಡಿಕೊಂಡಿರುವ ನಾರ್ಥ್ಈಸ್ಟ್ ಯುನೈಟೆಡ್ ಎಫ್ಸಿ ಶನಿವಾರ ನಡೆಯುವ ಐಎಸ್ಎಲ್ನ 2ನೇ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ಸಿ ವಿರುದ್ಧ ತಿಲಕ್ ಮೈದಾನದಲ್ಲಿ ಸೆಣಸಾಡಲಿದೆ.
ಕಳೆದ 7 ಆವೃತ್ತಿಗಳಲ್ಲಿ ಈ ಎರಡು ತಂಡಗಳು ಪ್ಲೇ ಆಫ್ನಲ್ಲಿ 3 ಬಾರಿ ಕಾಣಿಸಿಕೊಂಡಿರುವುದೇ ದೊಡ್ಡ ಸಾಧನೆ ಆಗಿದೆ. ಆದರೆ ಈ ಬಾರಿ ಎರಡು ತಂಡಗಳು ಸ್ಪ್ಯಾನಿಷ್ ಕೋಚ್ಗಳನ್ನು ನೇಮಕ ಮಾಡಿಕೊಂಡಿವೆ. ಹಾಗಾಗಿ ತಂಡಗಳ ಪ್ರದರ್ಶನದ ಮೇಲೆ ಗೆರಾರ್ಡ್ ನಸ್(NEUFC) ಮತ್ತು ಸರ್ಗಿಯೋ ಲೊಬೆರಾ(MCFC) ತಮ್ಮ ತಂಡಗಳ ಅದೃಷ್ಟವನ್ನು ಬದಲಾಯಿಸುವ ಭರವಸೆ ಹೊಂದಿದ್ದಾರೆ.
ಇಬ್ಬರೂ ಆಕ್ರಮಣ ಮನೋಭಾವದವರಾಗಿರುವುದರಿಂದ ಅಭಿಮಾನಿಗಳ ಮನ್ನಣೆಗೆ ಒಳಗಾಗಲಿದ್ದಾರೆ ಎನ್ನಲಾಗುತ್ತಿದೆ. ನಾರ್ತ್ ಈಸ್ಟ್ ಯುನೈಟೆಡ್ ಕಳೆದ ಬಾರಿ 9ನೇ ಸ್ಥಾನದಲ್ಲಿ ಕುಸಿದಿತ್ತು. ಹಾಗಾಗಿ ಈ ಬಾರಿ 19 ಮಂದಿ ಹೊಸ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಭಾರತದ ಯುವ ಪ್ರತಿಭೆಗಳ ಜೊತೆಗೆ ಉತ್ತಮ ವಿದೇಶಿ ಆಟಗಾರರನ್ನು ಸೇರಿಸಿಕೊಂಡಿದೆ.
ಇತ್ತ ಮುಂಬೈ ಸಿಟಿ ಕೂಡ ತಮ್ಮ ಮೊದಲ ಪಂದ್ಯದಲ್ಲಿ ಗೆಲ್ಲಲು ಸಿದ್ಧವಾಗಿದೆ. ಇದೊಂದು ನಮಗೆ ಕಠಿಣವಾದ ಪಂದ್ಯವಾಗಲಿದೆ. ಟೂರ್ನಿಯಲ್ಲಿ ಹಲವಾರು ಉತ್ತಮ ತಂಡಗಳು ಸೇರ್ಪಡೆಗೊಂಡಿರುವುದರಿಂದ ಈ ಆವೃತ್ತಿ ಅತ್ಯಂತ ಸ್ಪರ್ಧಾತ್ಮಕವಾಗಿರಲಿದೆ ಎಂದು ಮುಂಬೈ ಸಿಟಿ ಕೋಚ್ ಲೊಬೆರಾ ತಿಳಿಸಿದ್ದಾರೆ. ಅವರು ಕಳೆದ ಮೂರು ವರ್ಷಗಳಲ್ಲಿ ಗೋವಾ ಎಫ್ಸಿ ಪರ ಆಡಿದ್ದರು.