ಕರ್ನಾಟಕ

karnataka

ETV Bharat / sports

ಪೊಲೀಸ್​ ಅಧಿಕಾರಿಣಿಯಾಗಿ ರಸ್ತೆಯಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವ ಫುಟ್​ಬಾಲ್​ ಆಟಗಾರ್ತಿ - ಕೊರೊನಾ ವೈರಸ್​

ದೇಶ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ಭಾರತ ಮಹಿಳಾ ಫುಟ್​ಬಾಲ್​ ತಂಡದ ಆಟಗಾರ್ತಿ ಕದಿರೇಶನ್​ ಕಠಿಣ ದಿನಚರಿಯನ್ನು ಅನುಸರಿಸುತ್ತಿದ್ದಾರೆ. ಅವರು ಬೆಳಗ್ಗೆ 7 ಗಂಟೆಗೆ ಕೆಲಸಕ್ಕೆ ಹಾಜರಾಗಬೇಕಿದೆ. ಪ್ರತಿದಿನ ಮಧ್ಯರಾತ್ರಿಯವರೆಗೆ ಗಸ್ತು ತಿರುಗುತ್ತಿದ್ದಾರೆ.

ಇಂದುಮತಿ ಕತಿರೇಸನ್
ಇಂದುಮತಿ ಕತಿರೇಸನ್

By

Published : May 27, 2020, 11:08 AM IST

ಚೆನ್ನೈ:ಭಾರತ ಮಹಿಳಾ ಫುಟ್​ಬಾಲ್​ ತಂಡದ ಮಿಡ್​ ಫೀಲ್ಡರ್​ ಇಂದುಮತಿ ಕದಿರೇಶನ್ ಕೊರೊನಾ ವೈರಸ್​ ಬಿಕ್ಕಟ್ಟಿನ ಸಂದರ್ಭದಲ್ಲಿ ಪೊಲೀಸ್​ ಅಧಿಕಾರಿಯಾಗಿ ಪೊಲೀಸ್ ಸಮವಸ್ತ್ರ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಡೀ ದೇಶವೇ ಕಠಿಣ ಪರಿಸ್ಥಿಯಲ್ಲಿದೆ. ಆದರೆ ಪ್ರತಿಯೊಬ್ಬರು ಸುರಕ್ಷತೆ ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಎಲ್ಲರೂ ಮಾರ್ಗಸೂಚಿಗಳನ್ನು ಗಮನಿಸುತ್ತಿರುವರೆ ಎಂಬುದನ್ನು ನಾವು ಖಚಿತಪೊಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಅಗತ್ಯವಿಲ್ಲದೆ ಹೊರಗಡೆ ಓಡಾಡುವವರನ್ನು ಕೂಡ ಗಮನಿಸುತ್ತಿದ್ದೇವೆ ಎಂದು ಕತಿರೇಸನ್​ ತಿಳಿಸಿದ್ದಾರೆಂದು ಅಖಿಲ ಭಾರತ ಫುಟ್​ಬಾಲ್​ ಫೆಡರೇಶನ್​ನ ಅಧಿಕೃತ ವೆಬ್​ಸೈಟ್​ನಲ್ಲಿ ಉಲ್ಲೇಖಿಸಿದೆ.

ರಾಷ್ಟ್ರ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ಕದಿರೇಶನ್​ ಕಠಿಣ ದಿನಚರಿಯನ್ನು ಅನುಸರಿಸುತ್ತಿದ್ದಾರೆ. ಅವರು ಬೆಳಗ್ಗೆ 7 ಗಂಟೆಗೆ ಕೆಲಸಕ್ಕೆ ಹಾಜರಾಗಬೇಕಿದೆ. ಅವರು ಪ್ರತಿದಿನ ಮಧ್ಯರಾತ್ರಿಯವರೆಗೆ ಗಸ್ತು ತಿರುಗುವ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಂದುಮತಿ ಕದಿರೇಶನ್

ಕದಿರೇಶನ್​ ಅವರು ಕೊರೊನಾ ವೈರಸ್​ ದೇಶವನ್ನು ಸಂಕಷ್ಟಕ್ಕೀಡು ಮಾಡಿರುವ ಇಂತಹ ಸಂದರ್ಭದಲ್ಲಿ ಪ್ರತಿದಿನವೂ ದೇಶಕ್ಕಾಗಿ ಆಡುತ್ತಿದ್ದಾರೆ ಎಂದು ತಮಿಳುನಾಡು ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ತಿಳಿಸಿದ್ದಾರೆ.

" ಇದು ವೈಯಕ್ತಿಕವಾಗಿ ನನಗೆ ಬೇಡಿಕೆಯ ಸಮಯವಾಗಿದೆ. ಈ ಸಂದರ್ಭದಲ್ಲಿ ನನಗೆ ಬೇರೇನು ಮಾಡಲು ಸಮಯವಿಲ್ಲ. ಈ ರೀತಿಯ ಕಷ್ಟದ ಸಮಯದಲ್ಲಿ ನೀವು ಸಾಮಾನ್ಯವಾಗಿ ನಿಮ್ಮ ಕುಟುಂಬದವರಿಂದಿಗೆ ಸಮಯ ಕಳೆಯಲು ಬಯಸುತ್ತೀರಿ. ಆದರೆ ನನಗೆ ಹೆಚ್ಚು ಅವಕಾಶಗಳಿಲ್ಲ. ಇದು ರಾಷ್ಟ್ರದ ಕರೆ, ನಾನು ನನ್ನ ರಾಷ್ಟ್ರಕ್ಕಾಗಿ ಪ್ರತಿದಿನ ಆಡಬೇಕಾಗಿದೆ" ಎಂದು ಅವರು ಹೇಳಿದ್ದಾರೆ.

ನಮ್ಮ ಕೆಲಸದ ವೇಳೆ ಬದಲಾಗುತ್ತಿರುತ್ತದೆ. ಕೆಲವೊಮ್ಮೆ ನಾವು ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತೇವೆ. ಕೆಲವೊಮ್ಮೆ ವಾಹನಗಳ ಪರಿಶೀಲನೆ ನಡೆಸುವ ಕೆಲಸ ನಿರ್ವಹಿಸುತ್ತೇನೆ. ನನ್ನಂತೆಯೇ ಕೆಲವರು ಕಾರ್ಯ ನಿರ್ವಹಿಸುತ್ತಾರೆ. ನಾವು ನಮ್ಮ ಠಾಣೆಯಿಂದ ದೂರಕ್ಕೆ ಪ್ರಯಾಣ ಮಾಡಬೇಕಿರುತ್ತದೆ. ಇದು ಕಷ್ಟದ ಸಮಯ, ಆದರೆ ನನಗೆ ಈ ಬಗ್ಗೆ ಯಾವುದೇ ದೂರುಗಳಿಲ್ಲ ಎಂದು ತಮ್ಮ ನಾಡಿಗೆ ಸೇವೆ ಸಲ್ಲಿಸುತ್ತಿರುವುದರ ಬಗ್ಗೆ ಹೆಮ್ಮೆಪಟ್ಟಿದ್ದಾರೆ.

ABOUT THE AUTHOR

...view details