ಕ್ಯಾಂಪ್ ನೌ: ಕೆಲವು ದಿನಗಳ ಹಿಂದೆ ಎದೆ ನೋವಿನೊಂದಿಗೆ ಮೈದಾನದಲ್ಲಿ ಕುಸಿದು ಬಿದ್ದಿದ್ದ ಅರ್ಜೆಂಟೀನಾದ ಸ್ಟ್ರೈಕರ್ ಸೆರ್ಜಿಯೋ ಅಗುರೋ ತಮ್ಮ ಫುಟ್ಬಾಲ್ ಕ್ರೀಡೆಗೆ ಅನಿವಾರ್ಯವಾಗಿ ನಿವೃತ್ತಿ ಘೋಷಿಸಿದ್ದಾರೆ.
"ನಾನು ವೃತ್ತಿಪರ ಫುಟ್ಬಾಲ್ ಆಡುವುದನ್ನು ನಿಲ್ಲಿಸಲು ನಿರ್ಧರಿಸಿದ್ದೇನೆ " ಎಂದು 33 ವರ್ಷದ ಬಾರ್ಸಿಲೋನಾ ಸ್ಟ್ರೈಕರ್ 18 ವರ್ಷಗಳ ಸಮೃದ್ಧ ವೃತ್ತಿಜೀವನಕ್ಕೆ ಸ್ನೇಹಿತರು, ಕುಟುಂಬ ಮತ್ತು ತಂಡದ ಸಹ ಆಟಗಾರರು ಮತ್ತು ಪ್ರೇಕ್ಷಕರ ಮುಂದೆ ಬುಧವಾರ ಕಣ್ಣೀರುಡಿತ್ತಲೇ ನಿವೃತ್ತಿ ಘೋಷಿಸಿದರು.
ಪ್ರಸ್ತುತ ವಿಶ್ವದ ಶ್ರೇಷ್ಠ ಸ್ಟ್ರೈಕರ್ಗಳಲ್ಲಿ ಒಬ್ಬರಾಗಿರುವ ಅಗುರೋ ಅಕ್ಟೋಬರ್ 30ರಂದು ಅಲವೆಸ್ ತಂಡದ ವಿರುದ್ಧ ಪಂದ್ಯ ನಡೆಯುತ್ತಿದ್ದ ವೇಳೆಯೇ ಎದೆ ನೋವಿನಿಂದ ಮೈದಾನ ತೊರೆದು ಪರೀಕ್ಷೆಗೆ ಒಳಗಾಗಿದ್ದರು.