ಮ್ಯುನಿಚ್: ಬೇಯರ್ನ್ ಮ್ಯೂನಿಚ್ ಮತ್ತು ಜರ್ಮನಿ ತಂಡದ ಮಾಜಿ ಫಾರ್ವರ್ಡ ಆಟಗಾರ ಗೆರ್ಡ್ ಮುಲ್ಲರ್ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಕ್ಲಬ್ ಭಾನುವಾರ ಘೋಷಿಸಿದೆ.
ಮುಲ್ಲರ್ ಮ್ಯೂನಿಚ್ ಪರ 566 ಗೋಲು ಸಿಡಿಸಿದ ದಾಖಲೆ ಹೊಂದಿದ್ದಾರೆ. ಬಂಡೆಸ್ಲಿಗಾದಲ್ಲಿ 365 ಗೋಲುಗಳನ್ನು ಸಿಡಿಸುವ ಮೂಲಕ ಲೀಗ್ ಇತಿಹಾಸದಲ್ಲಿ ಗರಿಷ್ಠ ಗೋಲು ಸಿಡಿಸಿದ ಫುಟ್ಬಾಲ್ ಪ್ಲೇಯರ್ ಎಂಬ ದಾಖಲೆಯನ್ನು ಮುಲ್ಲರ್ ಹೊಂದಿದ್ದರು.
" ಗೆರ್ಡ್ ಮುಲ್ಲರ್ ಫುಟ್ಬಾಲ್ ಜಗತ್ತಿನ ಶ್ರೇಷ್ಠ ಸ್ಟ್ರೈಕರ್ ಮತ್ತು ವಿಶ್ವ ಕ್ರೀಡೆ ಕಂಡ ಉತ್ತಮ ವ್ಯಕ್ತಿ " ಎಂದು ಬೇಯರ್ನ್ ಅಧ್ಯಕ್ಷ ಹರ್ಬರ್ಟ್ ಹೈನರ್ ಮರಿಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ". ನಾವೆಲ್ಲರೂ ಈ ದುಃಖದ ಸಂದರ್ಭದಲ್ಲಿ ಆತನ ಪತ್ನಿ ಉಸ್ಚಿ ಹಾಗೂ ಆತನ ಕುಟುಂಬದೊಂದಿಗೆ ಜೊತೆ ಇರುತ್ತೇವೆ ಎಂದಿದ್ದಾರೆ.