ಕರ್ನಾಟಕ

karnataka

ETV Bharat / sports

ಭಾರತ ಫುಟ್​ಬಾಲ್​ ತಂಡದ ಮಾಜಿ ಗೋಲ್​ ಕೀಪರ್​ ಪ್ರಶಾಂತ್ ದೊರ ನಿಧನ

44 ವರ್ಷದ ಪ್ರಶಾಂತ್​ ಪತ್ನಿ ಮತ್ತು 12 ವರ್ಷದ ಮಗನನ್ನು ಅಗಲಿದ್ದಾರೆ. ಇವರ ಸಾವಿಗೆ ಭಾರತ ಫುಟ್​ಬಾಲ್ ತಂಡ ಮತ್ತು ಮೋಹನ್​ ಬಾಗನ್ ಕ್ಲಬ್​ ಟ್ವಿಟರ್​ ಮೂಲಕ ಸಂತಾಪ ಸೂಚಿಸಿವೆ. ​

ಪ್ರಶಾಂತ್ ದೊರ ನಿಧನ
ಪ್ರಶಾಂತ್ ದೊರ ನಿಧನ

By

Published : Jan 26, 2021, 7:28 PM IST

ಕೋಲ್ಕತ್ತಾ: ಭಾರತ ಫುಟ್​ಬಾಲ್​ ತಂಡದ ಮಾಜಿ ಗೋಲ್​ ಕೀಪರ್​ ಪ್ರಶಾಂತ್ ದೊರ ಮಂಗಳವಾರ ತಮ್ಮ 44ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಪ್ರಶಾಂತ್​ ಹಿಮೋಫಾಗೊಸೈಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್ (ಹೆಚ್‌ಎಲ್‌ಹೆಚ್)ನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

ಪ್ರಶಾಂತ್​ ಅವರ ವೃತ್ತಿ ಜೀವನದಲ್ಲಿ ಕೋಲ್ಕತ್ತಾದ ಪ್ರಸಿದ್ಧ ಕ್ಲಬ್​ಗಳಾದ ಮೋಹನ್ ಬಾಗನ್​, ಈಸ್ಟ್​ ಬೆಂಗಾಲ್ ಮತ್ತು ಮೊಹಮ್ಮದನ್ ಪರ ಹಲವಾರು ವರ್ಷಗಳ ಕಾಲ ಪ್ರತಿನಿಧಿಸಿದ್ದರು. ಪ್ರಶಾಂತ್​ ದೊರ ಸಂತೋಷ್​ ಟ್ರೋಫಿಯಲ್ಲಿ ಬೆಂಗಾಲ್ ತಂಡವನ್ನು ಕೂಡ ಪ್ರತಿನಿಧಿಸಿದ್ದರು.

ಪ್ರಶಾಂತ್ ಅವರು​ ಪತ್ನಿ ಮತ್ತು 12 ವರ್ಷದ ಮಗನನ್ನು ಅಗಲಿದ್ದಾರೆ. ಇವರ ಸಾವಿಗೆ ಭಾರತ ಫುಟ್​ಬಾಲ್ ತಂಡ ಮತ್ತು ಮೋಹನ್​ ಬಾಗನ್ ಕ್ಲಬ್​ ಟ್ವಿಟರ್​ ಮೂಲಕ ಸಂತಾಪ ಸೂಚಿಸಿವೆ. ​

ABOUT THE AUTHOR

...view details