ಕರ್ನಾಟಕ

karnataka

ETV Bharat / sports

ಭಾರತದ ಮಾಜಿ ಫುಟ್​ಬಾಲ್​ ಆಟಗಾರ ಮಣಿತೊಂಬಿ ಸಿಂಗ್ ನಿಧನ - ಮೋಹನ್ ಬಗಾನ್​

39 ವರ್ಷದ ಮಣಿತೊಂಬಿ 2002 ರಲ್ಲಿ ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದಲ್ಲಿ ನಡೆದಿದ್ದ ಎಲ್​ಜಿ ಕಪ್ ಜಯಿಸಿದ್ದ ಭಾರತೀಯ ತಂಡದ ಸದಸ್ಯರಾಗಿದ್ದರು.

ಮಣಿತೊಂಬಿ ಸಿಂಗ್​
ಮಣಿತೊಂಬಿ ಸಿಂಗ್​

By

Published : Aug 9, 2020, 7:38 PM IST

ಕೋಲ್ಕತ್ತಾ: ಭಾರತ ಫುಟ್ಬಾಲ್ ತಂಡದ ಆಟಗಾರ ಲೈಶ್ರಾಮ್​ ಮಣಿತೊಂಬಿ ಸಿಂಗ್ ಭಾನುವಾರ ನಿಧನರಾಗಿದ್ದಾರೆ.

ಪ್ರಸಿದ್ಧ ಫುಟ್​ಬಾಲ್​ ಕ್ಲಬ್​ ಮೊಹನ್ ಬಗಾನ್​ ತಂಡದ ಆಟಗಾರನಾಗಿರುವ ಮಣಿತೊಂಬಿ ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಭಾನುವಾರ ಮುಂಜಾನೆ ಇವರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಪತ್ನಿ ಮತ್ತು 8 ವರ್ಷದ ಮಗನನ್ನು ಇವರು ಅಗಲಿದ್ದಾರೆ.

ಅಪಾರ ಸಾಮರ್ಥ್ಯವುಳ್ಳ ಅದ್ಭುತ ಆಟಗಾರನನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಐಐಎಫ್​ಎಫ್​ ಕಾರ್ಯದರ್ಶಿ ಕುಶಾಲ್​ ದಾಸ್ ​ಸಂತಾಪ ಸೂಚಿಸಿದ್ದಾರೆ.

'ಕ್ಲಬ್‌ನ ಮಾಜಿ ನಾಯಕನ ಅಕಾಲಿಕ ಮರಣಕ್ಕೆ ಮೋಹನ್ ಬಗಾನ್ ತೀವ್ರ ಸಂತಾಪ ಸೂಚಿಸುತ್ತಿದೆ. ಅವರ ಕುಟುಂಬಕ್ಕೆ ಇಂಥ ಸಂಕಷ್ಟದ ಸಂದರ್ಭದಲ್ಲಿ ದೇವರು ಧೈರ್ಯ ತುಂಬಲಿ ಎಂದು ಪ್ರಾರ್ಥಿಸುತ್ತೇವೆ' ಎಂದು ಮೋಹನ್ ಬಾಗಾನ್ ಟ್ವಿಟರ್‌ನಲ್ಲಿ ಬರೆದುಕೊಂಡಿದೆ.

ABOUT THE AUTHOR

...view details