ಉಡುಪಿ:ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಶೇಖರ ಪದ್ದು ಬಂಗೇರ ಗುರುವಾರ ಕೋವಿಡ್ಗೆ ಬಲಿಯಾಗಿದ್ದಾರೆ.
ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಶೇಖರ ಬಂಗೇರ ಕೋವಿಡ್ಗೆ ಬಲಿ
ಉಡುಪಿಯ ಬಡಾನಿಡಿಯೂರು ಮೂಲದ ಶೇಖರ ಬಂಗೇರ ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ಭಾರತ ತಂಡದ ಗೋಲ್ ಕೀಪರ್ ಮತ್ತು ನಾಯಕರಾಗಿದ್ದರು.
ಶೇಖರ್ ಬಂಗೇರಾ ಕೋವಿಡ್ಗೆ ಬಲಿ
ಉಡುಪಿಯ ಬಡಾನಿಡಿಯೂರು ಮೂಲದ 74 ವರ್ಷದ ಶೇಖರ ಬಂಗೇರ ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ಬೆಳಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ. ಇವರು 80ರ ದಶಕದಲ್ಲಿ ಭಾರತ ತಂಡದ ಗೋಲ್ ಕೀಪರ್ ಮತ್ತು ನಾಯಕರಾಗಿದ್ದರು.
ಇವರು ಬಹುಕಾಲ ಮುಂಬೈಯಲ್ಲೇ ವಾಸವಾಗಿದ್ದರು. ಹಲವು ಸಂಘ ಸಂಸ್ಥೆಗಳಲ್ಲಿ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರಿಂದ ಬಂಗೇರ ಅವರ ಅಂತ್ಯ ಸಂಸ್ಕಾರ ಉಡುಪಿಯಲ್ಲೇ ಧರ್ಮಗುರುಗಳ ನೇತೃತ್ವದಲ್ಲಿ ವಿಧಿವತ್ತಾಗಿ ನಡೆಯಲಿದೆ.
Last Updated : Jun 10, 2021, 7:46 PM IST