ಜೂರಿಚ್: ಫಿಫಾದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ (ವರ್ಚುಯಲ್ ಕಾರ್ಯಕ್ರಮ)ವು ಡಿಸೆಂಬರ್ 17 ರಂದು ನಡೆಯಲಿದೆ ಎಂದು ಸೊಕರ್ಸ್ ಆಡಳಿತ ಮಂಡಳಿ ಶುಕ್ರವಾರ ತಿಳಿಸಿದೆ.
ಸೆಪ್ಟೆಂಬರ್‌ನಲ್ಲಿ ಅತ್ಯುತ್ತಮ ಫಿಫಾ ಫುಟ್ಬಾಲ್ ಪ್ರಶಸ್ತಿಗಳನ್ನು ನೀಡಲು ಉದ್ದೇಶಿಸಲಾಗಿತ್ತು. ಆದರೆ ಕೊರೊನಾ ಕಾರಣ ಮುಂದೂಡಲಾಗಿದ್ದು, ಈಗ ಮೂಹೂರ್ತ ಫಿಕ್ಸ್ ಆಗಿದೆ.
ಕಳೆದ ವರ್ಷ ಮಿಲನ್‌ನಲ್ಲಿ, ಲಿಯೋನೆಲ್ ಮೆಸ್ಸಿ 6ನೇ ಫಿಫಾ ಪುರುಷರ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಮತ್ತು ಮೇಗನ್ ರಾಪಿನೋಯ್ ತನ್ನ ಮೊದಲ ಅತ್ಯುತ್ತಮ ಮಹಿಳಾ ಆಟಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಉತ್ತಮ ಆಟಗಾರರನ್ನು ಆಯ್ಕೆ ಮಾಡಲು ಡಿಸೆಂಬರ್ 9 ರವರೆಗೆ ರಾಷ್ಟ್ರೀಯ ತಂಡದ ನಾಯಕರು ಮತ್ತು ತರಬೇತುದಾರರ ಜೊತೆಗೆ ಮಾಧ್ಯಮಗಳು ಮತ್ತು ಅಭಿಮಾನಿಗಳಿಗೆ ವೋಟಿಂಗ್ ಮಾಡುವ ಅವಕಾಶವನ್ನು ಮುಂದಿನ ಬುಧವಾರ ಕಲ್ಪಿಸಲಾಗಿದೆ.
ಅತ್ಯುತ್ತಮ ಆಟಗಾರರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಫಿಫಾ ತಿಳಿಸಿದೆ. ಫಿಫಾ ನ್ಯಾಯಯುತ ಆಟ ಮತ್ತು ವಿಶೇಷ ಅಭಿಮಾನಿ ಸಮೂಹ ಹೊಂದಿದವರಿಗೆ ಈ ಪ್ರಶಸ್ತಿಗಳನ್ನು ನೀಡುತ್ತದೆ. ಈ ವರ್ಚುಯಲ್ ಕಾರ್ಯಕ್ರಮ ಡಿಸೆಂಬರ್ 17 ರಂದು ನಡೆಯಲಿದೆ.