ಲಂಡನ್: ಹಾಲಿ ಚಾಂಪಿಯನ್ ಮ್ಯಾಂಚೆಸ್ಟರ್ ಸಿಟಿ ಭಾನುವಾರ ನಡೆದ ಎಪ್ಎ ಕಪ್ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ನ್ಯೂ ಕ್ಯಾಸ್ಟಲ್ ವಿರುದ್ಧ 2-0ಯಲ್ಲಿ ಗೆದ್ದು ಸೆಮಿಫೈನಲ್ಸ್ ಪ್ರವೇಶಿಸಿದೆ.
ಮೊದಲಾರ್ಧದಲ್ಲಿ ಅಧಿಪತ್ಯ ಸಾಧಿಸಿದ ಸಿಟಿ ಕ್ಲಬ್‌ಗೆ, ಸಿಕ್ಕ ಒಂದು ಪೆನಾಲ್ಟಿ ಅವಕಾಶವನ್ನು ಡಿ ಬ್ರುಯ್ನ್ 37ನೇ ನಿಮಿಷದಲ್ಲಿ ಗೋಲುಗಳಿಸಿ ಮುನ್ನಡೆ ತಂದುಕೊಟ್ಟರು.
ದ್ವಿತೀಯಾರ್ಧದಲ್ಲಿ ನ್ಯೂ ಕ್ಯಾಸ್ಟಲ್ ತಿರುಗಿ ಬಿದ್ದಿತಾದರೂ ಗೋಲುಗಳಿಸಿ ಸಮಬಲ ಸಾಧಿಸುವ ಅದ್ಬುತ ಅವಕಾಶವನ್ನು ಡ್ವೈಟ್ ಗೇಲ್ ಮಿಸ್ ಮಾಡಿಕೊಂಡರು.
ಈ ಅದ್ಬುತ ಅವಕಾಶವನ್ನು ಸ್ಟಿವ್ ಬ್ರೂಸ್ ಪಡೆ ಮಿಸ್ ಮಾಡಿಕೊಂಡರೆ ಅತ್ತ ಸಿಟಿ ಕ್ಲಬ್ ತಂಡದ ಸ್ಟರ್ಲಿಂಗ್ ಪೆನಾಲ್ಟಿ ಪ್ರದೇಶದಿಂದ ಎಡ್ಜ್ ಮಾಡಿ ಗೋಲುಗಳಿಸಿ ತಂಡದ ಗೆಲುವಿನ ಅಂತರವನ್ನು 2-0 ಗೆ ಏರಿಸಿದರು.
ಈ ವರ್ಷದ ಎಲ್ಲ ನಾಲ್ಕು ಕ್ವಾರ್ಟರ್ ಫೈನಲ್ ಪಂದ್ಯಗಳು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆದವು. 1987ರ ನಂತರ ಇದೇ ಮೊದಲ ಬಾರಿಗೆ ಹೊರಗಿನ ತಂಡಗಳು ಜಯ ಸಾಧಿಸಿವೆ.
ಸಿಟಿ ತನ್ನ ಮುಂದಿನ ಪಂದ್ಯದಲ್ಲಿ ಅರ್ಸೆನಲ್ ವಿರುದ್ಧ ಸೆಣಸಾಡಲಿದೆ. ಮತ್ತೊಂದು ಸೆಮಿಫೈನಲ್ಸ್ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಚೆಲ್ಸಿಯಾ ವಿರುದ್ಧ ಕಾದಾಟ ನಡೆಸಲಿದೆ. ಈ ಎರಡು ಪಂದ್ಯಗಳು ಜುಲೈ 18-19 ರಂದು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿವೆ.