ಕರ್ನಾಟಕ

karnataka

ETV Bharat / sports

ದೇಶದ ಕಿರಿಯ ಆಟಗಾರರಿಗೆ ಉತ್ತಮ ಭವಿಷ್ಯವಿದೆ: ಹೈದರಾಬಾದ್ ಕೋಚ್​ ಮಾಕ್ವೆರ್ಜ್ - ಮ್ಯಾನುಯೆಲ್ ಮಾರ್ಕ್ವೆಜ್ ರೋಕಾ

ಈಟಿವಿ ಭಾರತದೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ಹೈದರಾಬಾದ್ ಎಫ್​ಸಿ ಕೋಚ್​​ ಮಾಕ್ವೆರ್ಜ್ ತಂಡದೊಂದಿಗಿನ ಅವರ ಅನುಭವ ಹಂಚಿಕೊಂಡಿದ್ದಾರೆ. ಯುವ ಆಟಗಾರರನ್ನು ಹೊಂದಿರುವ ಹೆಚ್​​ಫ್​ಸಿ ತಂಡ ಇಂದು ಒಡಿಶಾ ವಿರುದ್ಧ ಮೊದಲ ಪಂದ್ಯವಾಡುತ್ತಿದೆ. ಈ ಪಂದ್ಯ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

Hyderabad Coach Mackervz
ಹೈದರಾಬಾದ್ ಕೋಚ್​ ಮಾಕ್ವೆರ್ಜ್

By

Published : Nov 23, 2020, 12:48 PM IST

ಹೈದರಾಬಾದ್​: ಕೊರೊನಾ ನಡುವೆ ಉತ್ತಮ ಆರಂಭ ಪಡೆದಿರುವ ಇಂಡಿಯನ್​​ ಸೂಪರ್ ಲೀಗ್ ಸೀಸನ್ 7 ಲೀಗ್ ಹಂತದ ಪಂದ್ಯಾವಳಿಗಳು ನಡೆಯುತ್ತಿವೆ. ಎಟಿಕೆ ಮೋಹನ್ ಬಗಾನ್ ತಂಡ ಉತ್ತಮ ಲಯದಲ್ಲಿದ್ದರೆ. ಇತ್ತ ಬೆಂಗಳೂರು ಎಫ್​ಸಿ-ಗೋವಾ ಎಫ್​​ಸಿ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ.

ಈ ಬಾರಿಯ ಸೀಸನ್​ನಲ್ಲಿ ಹೈದರಾಬಾದ್ ಎಫ್​​ಸಿ ಇಂದು ತನ್ನ ಮೊದಲ ಪಂದ್ಯವನ್ನು ಒಡಿಶಾ ಎಫ್​​​ಸಿ ವಿರುದ್ಧ ಆಡಲಿದೆ. ಆದರೆ, ಕಳೆದ ಸೀಸನ್​ನಲ್ಲಿ ಹೈದರಾಬಾದ್ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಆಡಿದ 18 ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯ ಗೆದ್ದು, 10 ಅಂಕಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿತ್ತು.

ಕಳೆದ ಸೀಸನ್​ನಲ್ಲಿ ಪಿಲ್ ಬ್ರೌನ್​​ ಕೋಚ್​ ಆಗಿ ಹಾಗೂ ಮಧ್ಯಂತರ ಕೋಚ್ ಆಗಿ ಬೆಂಗಳೂರು ಎಫ್​ಸಿಯ ಮಾಜಿ ಮ್ಯಾನೇಜರ್ ಆಲ್ಬರ್ಟ್​ ರೋಕಾ ನೇಮಕವಾಗಿದ್ದರು.

ಬಳಿಕ ರೋಕಾ ಬಾರ್ಸಿಲೋನಾ ಪರ ಫಿಟ್​ನೆಸ್ ಕೋಚ್ ಆಗಿ ನೇಮಕ ಹೊಂದಿದ ಕಾರಣ ಹೈದರಾಬಾದ್ ಎಫ್​ಸಿ ತೊರೆದಿದ್ದರು. ಇದೆಲ್ಲದರ ನಡುವೆ ಹೈದರಾಬಾದ್ ಕೋಚ್​ ಹುಡುಕಾಟ ನಡೆಸಿ ಮ್ಯಾನುಯೆಲ್ ಮಾರ್ಕ್ವೆಜ್ ರೋಕಾ ಅವರನ್ನು ಕೋಚ್​ ಆಗಿ ನೇಮಿಸಿದೆ.

ಮನೋಲೋ ಮಾರ್ಕ್ವೆಜ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮ್ಯಾನುಯೆಲ್ ಮಾರ್ಕ್ವೆಜ್ ರೋಕಾ, ಸ್ಪೇನ್, ಕ್ರೊಯೇಷಿಯಾ ಮತ್ತು ಥಾಯ್ಲೆಂಡ್​​​​​​‌ನ ಉನ್ನತ ವಿಭಾಗದ ಫುಟ್ಬಾಲ್​ ಕ್ಲಬ್‌ಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಇದೀಗ ಟೀಂ ಕುರಿತು ಈಟಿವಿ ಭಾರತ ಜೊತೆ ಮಾತನಾಡಿರುವ ಕೋಚ್ ಮಾಕ್ವೆರ್ಜ್​, ನಾವು ಹೆಚ್ಚಿನ ಯುವ ಆಟಗಾರರನ್ನು ಹೊಂದಿದ್ದೇವೆ. ರೋಹಿತ್ ದಾನು, ಆಕಾಶ್ ಮಿಶ್ರಾ, ಬಿಯಾಕ, ಓಪಿ, ಫರ್ನಾಂಡಿಸ್​ಗಳಂತ ಆಡಗಾರರು ಮುಂದೆ ತಂಡದ ಸ್ಟಾರ್ ಪ್ಲೇಯರ್ಸ್​ ಆಗಲಿದ್ದಾರೆ. ಇವರೆಲ್ಲ ತಂಡಕ್ಕೆ ಹೊಸ ಚೈತನ್ಯ ತುಂಬಲಿದ್ದಾರೆ ಎಂದಿದ್ದಾರೆ.

ನಮಗೆ ಮೊದಲ ಪಂದ್ಯವೆ ಮುಖ್ಯ ಎನಿಸಿದೆ, ಟೂರ್ನಿಯಲ್ಲಿ ಗೆಲುವಿನಿಂದ ಆರಂಭ ಪಡೆದರೆ ಉತ್ತಮ. ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಲಿದ್ದೇವೆ. ತಂಡ ಸಹ ಸಂಪೂರ್ಣ ಸಜ್ಜಾಗಿದೆ. ಇಷ್ಟೇ ಅಲ್ಲದೆ ಭಾರತೀಯ ಫುಟ್ಬಾಲ್​ ಆಟಗಾರರಿಗೆ ಉತ್ತಮ ಭವಿಷ್ಯವಿದೆ ಎಂದಿದ್ದಾರೆ.

ಭಾರತದ ಕೆಲವು ಹಿರಿಯ ಆಟಗಾರರ ಕಠಿಣ ಪರಿಶ್ರಮವನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಅವರು ಉತ್ತಮ ಆಟಗಾರರು. ನನ್ನ ಪ್ರಕಾರ, ಭಾರತದ ಕಿರಿಯ ಆಟಗಾರರಿಗೆ ಉತ್ತಮ ಭವಿಷ್ಯವಿದೆ ಎಂದಿದ್ದಾರೆ.

ABOUT THE AUTHOR

...view details