ಮ್ಯಾಂಚೆಸ್ಟರ್ :ವಿಂಗರ್‌ನಿಂದ ಸೆಂಟ್ರಲ್ ಸ್ಟ್ರೈಕರ್‌ಗೆ ಬದಲಾದ ಬಳಿಕ ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್)ನ ಪ್ರಸ್ತುತ ಸೀಸನ್ಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಂಥೋನಿ ಮಾರ್ಷಿಯಲ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಶೆಫೀಲ್ಡ್ ವಿರುದ್ಧ ಮ್ಯಾಂಚೆಸ್ಟರ್ಗೆ ಗೆಲುವು : ಹ್ಯಾಟ್ರಿಕ್ ಗೋಲು ಬಾರಿಸಿದ ಮಾರ್ಷಿಯಲ್ - ಶೆಫೀಲ್ಡ್ ವಿರುದ್ಧ ಮ್ಯಾಂಚೆಸ್ಟರ್ಗೆ ಗೆಲುವು
ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರನ ಮೊದಲ ಹ್ಯಾಟ್ರಿಕ್ ಇದಾಗಿದ್ದು, ಅಲೆಕ್ಸ್ ಫರ್ಗುಸನ್ 2013 ರಲ್ಲಿ ನಿವೃತ್ತಿಯಾದ ನಂತರ ಹ್ಯಾಟ್ರಿಕ್ ಗೋಲು ಬಾರಿಸಿದ ಮೊದಲ ಆಟಗಾರನಾಗಿ ಮಾರ್ಷಿಯಲ್ ಹೊರಹೊಮ್ಮಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಶೆಫೀಲ್ಡ್ ಯುನೈಟೆಡ್ ವಿರುದ್ಧ 3-0 ಗೋಲು ಗಳಿಸುವ ಮೂಲಕ ಮ್ಯಾಂಚೆಸ್ಟರ್ ಯುನೈಟೆಡ್ ಗೆಲುವಿಗೆ ಮಾರ್ಷಿಯಲ್ ಕಾರಣರಾದರು. ಮ್ಯಾಂಚೆಸ್ಟರ್ ಪರ ಮಾರ್ಷಿಯಲ್ ಮೊದಲ ಹ್ಯಾಟ್ರಿಕ್ ಗೋಲು ಬಾರಿಸಿದ್ದಾರೆ. ಇದುವರೆಗೆ ಮಾರ್ಷಿಯಲ್ 19 ಗೋಲು ಹೊಡೆದಿದ್ದು, 2015 ರಲ್ಲಿ ಮೊನಾಕೊದಿಂದ ಹೊರ ಬಂದ ಬಳಿಕ ಗಳಿಸಿದ ಗರಿಷ್ಠ ಗೋಲುಗಳು ಇವಾಗಿವೆ.
ಮಾರ್ಷಿಯಲ್ ತನ್ನ ಸಾಮರ್ಥ್ಯವನ್ನು ತೋರ್ಪಡಿಸಲು ಪ್ರಸ್ತುತ ಸೀಸನ್ನಲ್ಲಿ ಇನ್ನೂ 14 ಪಂದ್ಯಗಳಿವೆ. ಇದರ ಜೊತೆ ಮ್ಯಾಂಚೆಸ್ಟರ್ನ ಸೃಜನಶೀಲತೆಯನ್ನು ಹೆಚ್ಚಿಸಲು ಬ್ರೂನೋ ಫರ್ನಾಂಡಿಸ್ ಮತ್ತು ಪಾಲ್ ಪೊಗ್ಬಾ ಅಂತಿಮವಾಗಿ ಸೆಂಟ್ರಲ್ ಮಿಡ್‌ಫೀಲ್ಡ್‌ನಲ್ಲಿ ಆಗಮಿಸಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ನ ಅಲೆಕ್ಸ್ ಫರ್ಗುಸನ್ 2013ರಲ್ಲಿ ನಿವೃತ್ತಿಯಾದ ನಂತರ ಹ್ಯಾಟ್ರಿಕ್ ಗೋಲು ಬಾರಿಸಿದ ಮೊದಲ ಆಟಗಾರನಾಗಿ ಮಾರ್ಷಿಯಲ್ ಹೊರಹೊಮ್ಮಿದ್ದಾರೆ.