ಕರ್ನಾಟಕ

karnataka

ETV Bharat / sports

75ರ ಇಳಿವಯಸ್ಸಿನಲ್ಲೂ ಫುಟ್ಬಾಲ್ ​ಕ್ಲಬ್​ ಜೊತೆ ಒಪ್ಪಂದ... ಗಿನ್ನೆಸ್​ ದಾಖಲೆ ಸೇರಿದ ಈಜಿಪ್ಟ್​ ಆಟಗಾರ - ಗಿನ್ನೆಸ್​ ದಾಖಲೆ ಈಜಿಪ್ಟ್ ಫುಟ್ಬಾಲ್​ ​ ಆಟಗಾರ

ಈಜಿಪ್ಟ್​ ಫುಟ್ಬಾಲ್ ಅಸೋಸಿಯೇಷನ್​ಗೆ 75 ವರ್ಷದ ಬಹಡೆರ್​ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕಳ್ಳುವ ಮೂಲಕ ಫುಟ್ಬಾಲ್ ಇತಿಹಾಸದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಗಿನ್ನೆಸ್​ ದಾಖಲೆ ಸೇರಿದ ಈಜಿಪ್ಟ್​ ಆಟಗಾರsigns 75-year-old footballer
ಗಿನ್ನೆಸ್​ ದಾಖಲೆ ಸೇರಿದ ಈಜಿಪ್ಟ್​ ಆಟಗಾರ

By

Published : Jan 23, 2020, 1:20 PM IST

Updated : Jan 23, 2020, 8:11 PM IST

ಲೀಡ್ಸ್​: ಈಜಿಪ್ಟ್​ನ 75 ವರ್ಷದ ಎಜ್ ಎಲ್ ದಿನ್ ಬಹಡೆರ್ ಎಂಬಾತ ಈಜಿಪ್ಟ್​ನ ತೃತೀಯ ವಿಭಾಗದ ಫುಟ್ಬಾಲ್ ಕ್ಲಬ್​ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ವಿಶ್ವದ ಅತ್ಯಂತ ಹಿರಿಯ ವೃತ್ತಿಪರ ಫುಟ್ಬಾಲ್​ ಆಟಗಾರ ಎಂಬ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ.

ಈಜಿಪ್ಟ್​ ಫುಟ್ಬಾಲ್ ಅಸೋಸಿಯೇಷನ್​ ಅಕ್ಟೋಬರ್​ 6 ರಂದು ಆಟಗಾರರ ಚಳಿಗಾಲದ ನೋಂದಣಿ ಕಾರ್ಯ ಆರಂಭಿಸಿದ್ದರು. ಈ ವೇಳೆ 75 ವರ್ಷದ ಬಹಡೆರ್​ ತಮ್ಮ ಹೆಸರನ್ನು ನೋಂದಣಿ ಮಾಡಿಸಿಳ್ಳುವ ಮೂಲಕ ಫುಟ್ಬಾಲ್ ಇತಿಹಾಸದ ಅತ್ಯಂತ ಹಿರಿಯ ವೃತ್ತಿಪರ ಫುಟ್ಬಾಲ್​ ಆಟಗಾರ ಎನಿಸಿಕೊಂಡಿದ್ದಾರೆ.

ಈಜಿಪ್ಟ್​ ಫುಟ್ಬಾಲ್​ ಫೆಡರೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ವಾಲಿದ್ ಅಲ್-ಅತ್ತರ್, ಕ್ಲಬ್​ನ ಆಟಗಾರರು ಹಾಗೂ ಅಧಿಕಾರಿಗಳು ಬಹಡೆರ್ ಅವರನ್ನು ಕಛೇರಿಗೆ ಬಂದಾಗ ಅವರನ್ನು ಸ್ವಾಗತಿಸಿ ಅವರ ನೋಂದಣಿ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ್ದಾರೆ.

75 ವರ್ಷದ ಬಹಡೆರ್​ ಕ್ಲಬ್​ ಪರ ಆಡುತ್ತಿದ್ದಂತೆ ಅವರ ಹೆಸರು ಗಿನ್ನೆಸ್​ ದಾಖಲೆ ಪಟ್ಟಿಗೆ ಸೇರಲಿದೆ. ಇವರಿಗಿಂತ ಮೊದಲು ಇಸ್ರೇಲ್​ನ ಇಸಾಕ್​ ಹಾಯಿಕ್ ಎಂಬುವವರು ಅತ್ಯಂತ ಹಿರಿಯ ವೃತ್ತಿಪರ ಫುಟ್​ಬಾಲ್​ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ. ಅವರು 2019ರಲ್ಲಿ ಇಸ್ರೇಲ್​ನ ನಾಲ್ಕನೇ ಹಂತದ ಇರೋನಿ ಅಥವಾ ಯೆಹುದ ಎಂಬ ಕ್ಲಬ್​ನಲ್ಲಿ ತಮ್ಮ 73 ವರ್ಷ ವಯಸ್ಸಿನಲ್ಲಿ ಫುಟ್ಬಾಲ್​ ಪಂದ್ಯದಲ್ಲಿ ಆಡಿದ್ದರು.

ಇದೀಗ ಎಜ್ ಎಲ್ ದಿನ್ ಬಹಡರ್ 75ನೇ ವಯಸ್ಸಿನಲ್ಲಿ ಪುಟ್​ಬಾಲ್​ ಆಡುವ ಮೂಲಕ ಗಿನ್ನೆಸ್​ ದಾಖಲೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಅವರು ತಮ್ಮ ಕ್ಲಬ್​ ಪರ ಎರಡು ಪೂರ್ಣ ಪಂದ್ಯಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

Last Updated : Jan 23, 2020, 8:11 PM IST

ABOUT THE AUTHOR

...view details