ಕರ್ನಾಟಕ

karnataka

ETV Bharat / sports

ಫುಟ್ಬಾಲ್ ಆಟಗಾರ್ತಿ, ಕೂಲಿ ಕಾರ್ಮಿಕನ ಮಗಳಿಗೆ ಹಾರ್ವರ್ಡ್​ ಯುನಿವರ್ಸಿಟಿಯಲ್ಲಿ ಓದುವ ಭಾಗ್ಯ

ಕೆಂಬ್ರಿಡ್ಜ್​ನಲ್ಲಿರು ಹಾರ್ವರ್ಡ್​ ವಿಶ್ವವಿದ್ಯಾಲಯದಲ್ಲಿ ಸೀಮಾ ಕುಮಾರಿ ಸ್ಕಾಲರ್​ಶಿಪ್​​​​ ಪಡೆದಿದ್ದಾರೆ ಎಂದು ಯುವ(Yuwa) ಎಂಬ ಎನ್​ಜಿಒ ಈ ಖುಷಿ ವಿಚಾರವನ್ನು ತನ್ನ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದೆ.

By

Published : Apr 24, 2021, 10:11 PM IST

,ಕೂಲಿ ಕಾರ್ಮಿಕನ ಮಗಳಿಗೆ ಹಾರ್ವರ್ಡ್​ ಯುನಿವರ್ಸಿಟಿಯಲ್ಲಿ ಓದುವ ಭಾಗ್ಯ
,ಕೂಲಿ ಕಾರ್ಮಿಕನ ಮಗಳಿಗೆ ಹಾರ್ವರ್ಡ್​ ಯುನಿವರ್ಸಿಟಿಯಲ್ಲಿ ಓದುವ ಭಾಗ್ಯ

ರಾಂಚಿ: ಜಾರ್ಖಂಡ್​ ರಾಜಧಾನಿ ರಾಂಚಿ ಜಿಲ್ಲೆಯ ದಾಹು ಎಂಬ ಹಳ್ಳಿಯ ಸೀಮಾ ಎಂಬ ಕೂಲಿ ಕಾರ್ಮಿಕರ ಮಗಳಿಗೆ ವಿಶ್ವಪ್ರಸಿದ್ಧ ಹಾರ್ವರ್ಡ್​ ವಿಶ್ವವಿದ್ಯಾಲಯದಲ್ಲಿ ಅಧ್ಯಾಯನ ಮಾಡಲು ಅವಕಾಶ ಲಭಿಸಿದೆ.

ಕೆಂಬ್ರಿಡ್ಜ್​ನಲ್ಲಿರುವ ಹಾರ್ವರ್ಡ್​ ವಿಶ್ವವಿದ್ಯಾಲಯದಲ್ಲಿ ಸೀಮಾ ಕುಮಾರಿ ಸ್ಕಾಲರ್​ಶಿಪ್​​​​​​​​ ಪಡೆದಿದ್ದಾರೆ ಎಂದು ಯುವ(Yuwa) ಎಂಬ ಎನ್​ಜಿಒ ಈ ಖುಷಿ ವಿಚಾರವನ್ನು ತನ್ನ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದೆ.

ಯುವ ಸಂಸ್ಥೆ ಮಾಡಿರುವ ಟ್ವೀಟ್​ನ ಮಾಹಿತಿಯ ಪ್ರಕಾರ ಸೀಮಾ ಅಶೋಕ ವಿಶ್ವವಿದ್ಯಾಲಯ, ಅಮೆರಿಕಾದ ಮೆಡೆಲ್ಬರಿ ಮತ್ತು ಟ್ರಿನಿಟಿ ಕಾಲೇಜಿನಿಂದಲೂ ಸ್ಕಾಲರ್​ಶಿಪ್​​ ಅವಕಾಶಗಳು ಬಂದಿದ್ದವೆಂದು ಹಾಗೂ ಸೀಮಾ ಹಾರ್ವರ್ಡ್​ ಯುನಿವರ್ಸಿಟಿಯ ಸ್ಕಾಲರ್​ಶಿಪ್​​​ಅನ್ನು ಸ್ವೀಕರಿಸಿದ್ದಾರೆಂದು ತಿಳಿದು ಬಂದಿದೆ.

ಸೀಮಾ ಪೋಷಕರು ದಿನಗೂಲಿ ನೌಕರರಾಗಿದ್ದು, ಯಾವುದೇ ಶಿಕ್ಷಣ ಪಡೆಯದ ಅವಿದ್ಯಾವಂತರು. ಸೀಮಾ 2012ರಲ್ಲಿ ಯುವ ಯೂತ್ ಫುಟ್​ಬಾಲ್​ ತಂಡಕ್ಕೆ ಸೇರಿದ್ದರು. ಆರಂಭದಲ್ಲಿ ಅವರು ತುಂಬಾ ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ ದೈರ್ಯ ಕಳೆದುಕೊಳ್ಳದ ಸೀಮಾ ಮುಂದುವರೆದಿದ್ದರು. ಇದೀಗ ಯುನಿವರ್ಸಿಟಿ ಮೆಟ್ಟಿಲು ಹತ್ತಿದ ಕುಟುಂಬದ ಮೊದಲ ಹುಡುಗಿ ಎನಿಸಿಕೊಂಡಿದ್ದಾರೆ.

ಇದನ್ನು ಓದಿ:ಯುವ ಆಟಗಾರರಿಗೆ ವಿಶ್ವಾಸ ತುಂಬುವಲ್ಲಿ ರವಿ ಶಾಸ್ತ್ರಿಯವರ ಸಾಮರ್ಥ್ಯ ಅಸಾಧಾರಣ: ಗವಾಸ್ಕರ್

ABOUT THE AUTHOR

...view details