ಕರ್ನಾಟಕ

karnataka

ETV Bharat / sports

ಗೋವಾದಲ್ಲಿ ಫುಟ್ಬಾಲ್​​ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಪ್ರತಿಮೆ ಸ್ಥಾಪನೆ - ಕ್ರಿಸ್ಟಿಯಾನೋ ರೊನಾಲ್ಡೊ

ಸುಮಾರು 410 ಕೆಜಿ ತೂಕವಿದ್ದು, ಯುವ ಪೀಳಿಗೆಯನ್ನು ಕ್ರೀಡೆಯತ್ತ ಪ್ರೇರೇಪಿಸುವುದು ಮತ್ತು ಅವರ ಕನಸುಗಳನ್ನು ಇಡೇರಿಸಿಕೊಳ್ಳಲು ಸ್ಪೂರ್ತಿಯಾಗಲಿ ಎನ್ನುವುದು ಪ್ರತಿಮೆ ಅನಾವರಣದ ಉದ್ದೇಶವಾಗಿದೆ.

Cristiano Ronaldo's statue installed in Goa
ಗೋವಾದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಪ್ರತಿಮೆ

By

Published : Dec 29, 2021, 3:54 PM IST

ಪಣಜಿ:ದೇಶದಲ್ಲಿ ಮತ್ತು ರಾಜ್ಯದಲ್ಲಿ ಯುವಕರು ಫುಟ್ಬಾಲ್​ ​ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಲು ಪ್ರೇರಣೆಯಾಗಲೆಂದು ಪೋರ್ಚುಗಲ್​ನ ಫುಟ್ಬಾಲ್​ ಲೆಜೆಂಡ್​ ಕ್ರಿಸ್ಟಿಯಾನೊ ಅವರ ಪ್ರತಿಮೆಯನ್ನು ಗೋವಾದ ಕಲಂಗುಟ್​ನಲ್ಲಿ ಸ್ಥಾಪಿಸಲಾಗಿದೆ.

ಸುಮಾರು 410 ಕೆಜಿ ತೂಕವಿದ್ದು, ಯುವ ಪೀಳಿಗೆಯನ್ನು ಕ್ರೀಡೆಯತ್ತ ಪ್ರೇರೇಪಿಸುವುದು ಮತ್ತು ಅವರ ಕನಸುಗಳನ್ನು ಇಡೇರಿಸಿಕೊಳ್ಳಲು ಸ್ಪೂರ್ತಿಯಾಗಲಿ ಎನ್ನುವುದು ಇದರ ಉದ್ದೇಶವಾಗಿದೆ.

" ಭಾರತದಲ್ಲಿ ಇದೇ ಮೊದಲ ಬಾರಿಗೆ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಯುವಕರಿಗೆ ಸ್ಪೂರ್ತಿಯಾಗಲಿ ಎನ್ನುವುದನ್ನು ಬಿಟ್ಟರೆ ಮತ್ತೇನೂ ಇಲ್ಲ. ನೀವೇನಾದರೂ ಫುಟ್ಬಾಲ್​​ ಕ್ರೀಡೆಯನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋಗಬೇಕೆಂದರೆ, ನಮ್ಮ ಬಾಲಕ ಮತ್ತು ಬಾಲಕಿಯರು ಈ ಪ್ರತಿಮೆಯನ್ನು ಪ್ರೇರೇಪಿಸಲಿದೆ. ಇದನ್ನು ನೋಡುತ್ತಾ ಸೆಲ್ಫಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಆಡಲು ಪ್ರೇರಣೆ ಪಡೆಯುತ್ತಾರೆ. ಸರ್ಕಾರ, ಪಾಲಿಕೆ ಮತ್ತು ಪಂಚಾಯತ್​ಗಳ ಕೆಲಸವೆಂದರೆ ಯುವ ಪೀಳಿಗೆಗೆ ಉತ್ತಮ ಸೌಲಭ್ಯ, ಒಳ್ಳೆಯ ಕ್ರೀಡಾಂಗಣಗಳನ್ನು ಒದಗಿಸಿಕೊಡುವುದು. ಅವುಗಳು ನಮ್ಮ ಹುಡುಗ - ಹುಡುಗಿಯರಿಗೆ ಅಗತ್ಯವಾಗಿದೆ" ಎಂದು ಗೋವಾ ಸಚಿವಾ ಮೈಕಲ್ ಲೋಬೋ ಎಎನ್​ಐಗೆ ಹೇಳಿದ್ದಾರೆ.

ಈ ಪ್ರತಿಮೆಯ ಸ್ಥಾಪನೆಗೆ ವಿರೋಧಿಸುವವರೂ ದೇಶದಲ್ಲಿ ಫುಟ್ಬಾಲ್​ ​ಕ್ರೀಡೆ ಬೆಳೆಯುವುದನ್ನು ನೋಡಲು ಇಷ್ಟಪಡದವರು ಎಂದು ಲೋನೋ ಇದೇ ಸಂದರ್ಭದಲ್ಲಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಈ ಪ್ರತಿಮೆ ನಿರ್ಮಾಣಕ್ಕೆ 12 ಲಕ್ಷ ಖರ್ಚಾಗಿದೆ. ಇದನ್ನು 3 ವರ್ಷಗಳ ಹಿಂದೆಯೇ ನಿರ್ಮಿಸಲಾಗಿತ್ತಾದರೂ ಕೋವಿಡ್​ ಕಾರಣದಿಂದ ಸ್ಥಾಪಿಸಲು ವಿಳಂಬವಾಗಿತ್ತು.

ಇದನ್ನೂ ಓದಿ:ನಿವೃತ್ತಿಗೂ ಮುನ್ನ ಭಾರತದಲ್ಲಿ ಟೆಸ್ಟ್​ ಸರಣಿ ಗೆದ್ದರೆ, ದೊಡ್ಡ ಸಾಧನೆ ಎಂದು ಭಾವಿಸುವೆ: ಡೇವಿಡ್​ ವಾರ್ನರ್​

ABOUT THE AUTHOR

...view details