ಕರ್ನಾಟಕ

karnataka

ETV Bharat / sports

ರೋನಾಲ್ಡೊಗೆ ಮತ್ತೆ ಒಕ್ಕರಿಸಿದ ಕೊರೊನಾ... ಬಾರ್ಸಿಲೋನಾ ವಿರುದ್ಧ ಪಂದ್ಯಕ್ಕೆ ಅಲಭ್ಯ - ಶ್ಚಿಯಾನೊ ರೊನಾಲ್ಡೊ ಕೋವಿಡ್ 19

ಈ ತಿಂಗಳ ಆರಂಭದಲ್ಲಿ ಅಂತಾರಾಷ್ಟ್ರೀಯ ವಿರಾಮದ ಸಮಯದಲ್ಲಿ ರೊನಾಲ್ಡೊ ಕೋವಿಡ್​ 19 ಪಾಸಿಟಿವ್ ವರದಿ ಪಡೆದಿದ್ದರು. ಪರಿಣಾಮ ಸ್ವೀಡನ್ ವಿರುದ್ಧದ ಯುಇಎಫ್‌ಎ ನೇಷನ್ಸ್ ಲೀಗ್ ಪಂದ್ಯದಿಂದ ಹಿಂದೆ ಸರಿದಿದ್ದರು. ಆದರೆ ರೊನಾಲ್ಡೊಗೆ ಆ ಸಂದರ್ಭದಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ ಎಂದು ಪೋರ್ಚುಗಲ್‌ನ ಫುಟ್‌ಬಾಲ್ ಫೆಡರೇಶನ್ ಹೇಳಿದೆ.

cristiano Ronaldo
ಕ್ರಿಶ್ಚಿಯಾನೋ ರೊನಾಲ್ಡೊ

By

Published : Oct 22, 2020, 9:12 PM IST

ಲಂಡನ್: ಮೋರ್ಚುಗಲ್ ಮತ್ತು ಜುವೆಂಟಸ್​ ಸ್ಟಾರ್​ ಕ್ರಿಶ್ಚಿಯಾನೋ ರೊನಾಲ್ಡೊಗೆ ಮತ್ತೊಮ್ಮೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಮುಂದಿನವಾರ ಬಾರ್ಸಿಲೋನ ತಂಡದ ವಿರುದ್ಧ ಮಹತ್ವದ ಪಂದ್ಯದಿಂದ ಹೊರಬಿದ್ದಿದ್ದಾರೆ.

ಈ ತಿಂಗಳ ಆರಂಭದಲ್ಲಿ ಅಂತಾರಾಷ್ಟ್ರೀಯ ವಿರಾಮದ ಸಮಯದಲ್ಲಿ ರೊನಾಲ್ಡೊ ಕೋವಿಡ್​ 19 ಪಾಸಿಟಿವ್ ವರದಿ ಪಡೆದಿದ್ದರು. ಪರಿಣಾಮ ಸ್ವೀಡನ್ ವಿರುದ್ಧದ ಯುಇಎಫ್‌ಎ ನೇಷನ್ಸ್ ಲೀಗ್ ಪಂದ್ಯದಿಂದ ಹಿಂದೆ ಸರಿದಿದ್ದರು. ಆದರೆ ರೊನಾಲ್ಡೊಗೆ ಆ ಸಂದರ್ಭದಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ ಎಂದು ಪೋರ್ಚುಗಲ್‌ನ ಫುಟ್‌ಬಾಲ್ ಫೆಡರೇಶನ್ ತಿಳಿಸಿತ್ತು.

ಇದೀಪ ಮತ್ತೊಮ್ಮೆ ಕೋವಿಡ್ 19 ಪಾಸಿಟಿವ್​ ದೃಢಪಟ್ಟಿರುವುದರಿಂದ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿಲ್ಲ. ಇದರಿಂದ ರೊನಾಲ್ಡೊ ಚಾಂಪಿಯನ್ಸ್​ ಲೀಗ್​ನಲ್ಲಿ ಕಣಕ್ಕಿಳಿಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಶೆಯುಂಟಾಗಿದೆ. ರೊನಾಲ್ಡೊ ಹುಷಾರಾಗಿದ್ದರೆ ಮುಂದಿನ ವಾರ ಮೆಸ್ಸಿ ಇರುವ ಬಾರ್ಸಿಲೋನಾ ವಿರುದ್ಧದ ಕದನ ಉತ್ತಮ ಪೈಪೋಟಿಯಿಂದ ಕೂಡಿರುತ್ತಿತ್ತು.

ಪೋರ್ಚುಗಲ್ ಸೂಪರ್​ ಸ್ಟಾರ್​ ರಿಯಲ್ ಮ್ಯಾಡ್ರಿಡ್​ ತಂಡದಿಂದ 2 ವರ್ಷಗಳ ಹಿಂದೆ ಜುವೆಂಟಸ್​ ಕ್ಲಬ್​ಗೆ ವರ್ಗಾವಣೆಗೊಂಡಿದ್ದರು. ಜುವೆಂಟಸ್ ರೊನಾಲ್ಡೊಗಾಗಿ 100 ಮಿಲಿಯನ್ ಯೂರೋ( 736 ಕೋಟಿ ರೂ ) ನೀಡಿತ್ತು.

ABOUT THE AUTHOR

...view details