ಹೈದರಾಬಾದ್: ಭಾರತದ ಮಾಜಿ ಫುಟ್ಬಾಲ್ ಆಟಗಾರ ಹಾಗೂ ಧ್ಯಾನ್ಚಂದ್ ಅವಾರ್ಡ್ ಪುರಸ್ಕೃತ ಸಯ್ಯದ್ ಶಾಹೀದ್ ಹಕೀಮ್ಗೆ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ದೃಡಪಟ್ಟಿದ್ದು, ಹೈದರಾಬಾದ್ನಲ್ಲಿ ಕ್ವಾರಂಟೈನ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
81 ವರ್ಷದ ಹಕೀಮ್ 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 1989 ರವರೆಗೆ ಖತರ್‌ನಲ್ಲಿ ನಡೆದ ಎಎಫ್‌ಸಿ ಏಷ್ಯಾಕಪ್ ಸೇರಿದಂತೆ 1989ರವರೆಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೆಫರಿ ಆಗಿ ಕಾರ್ಯನಿರ್ವಹಿಸಿದ್ದರು.
'' ಹೌದು, ನಾನು ಆರು ದಿನಗಳ ಹಿಂದೆ ಕೋವಿಡ್ -19 ಪರೀಕ್ಷೆಗೊಳಗಾಗಿದ್ದೆ . ಅದರಲ್ಲಿ ಪಾಸಿಟಿವ್ ವರದಿ ಬಂದಿದೆ. ರಾಜ್ಯ ಸರ್ಕಾರ ಕ್ವಾರಂಟೈನ್ ಸೆಂಟರ್ ಹಾಗಿ ಬದಲಾಯಿಸುರವ ಹೋಟೆಲ್ ಹೊಂದರಲ್ಲಿ ಇದ್ದೇನೆ" ಎಂದು ಹಕೀಮ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.