ಕರ್ನಾಟಕ

karnataka

ETV Bharat / sports

ಜನಾಂಗೀಯ ನಿಂದನೆ: ಎಡಿಸನ್ ಕವಾನಿಗೆ ಒಂದು ಕೋಟಿ ದಂಡ.. ಮೂರು ಪಂದ್ಯ ನಿಷೇಧ - ಎಡಿಸನ್ ಕವಾನಿಗೆ ಒಂದು ಕೋಟಿ ದಂಡ

ಜಾಮಾಜಿಕ ಜಾಲತಾಣದಲ್ಲಿ ಜನಾಗೀಯ ನಿಂದನೆಯ ಪದ ಬಳಸಿದ್ದಕ್ಕಾಗಿ, ಮ್ಯಾಂಚೆಸ್ಟರ್ ಯುನೈಟೆಡ್ ಸ್ಟ್ರೈಕರ್ ಎಡಿಸನ್ ಕವಾನಿಗೆ ನಿಷೇಧ ಹೇರಿ ದಂಡ ವಿಧಿಸಲಾಗಿದೆ.

Cavani 3-match ban means he can face Liverpool
ಎಡಿಸನ್ ಕವಾನಿಗೆ ಒಂದು ಕೋಟಿ ದಂಡ

By

Published : Jan 1, 2021, 10:53 AM IST

ಮ್ಯಾಂಚೆಸ್ಟರ್:ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ 'ನೆಗ್ರಿಟೊ' ಪದ ಬಳಸಿದ ನಂತರ ಮ್ಯಾಂಚೆಸ್ಟರ್ ಯುನೈಟೆಡ್ ಸ್ಟ್ರೈಕರ್ ಎಡಿಸನ್ ಕವಾನಿಗೆ ಮೂರು ಪಂದ್ಯಗಳ ನಿಷೇಧ ಮತ್ತು ಒಂದು ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.

ನವೆಂಬರ್ 29 ರಂದು ಸೌತಾಂಪ್ಟನ್ ವಿರುದ್ಧದ ಲೀಗ್‌ನಲ್ಲಿ ಯುನೈಟೆಡ್ ತಂಡವು 3-2 ಗೋಲುಗಳಿಂದ ಜಯಗಳಿಸಿದ ಸ್ಟ್ರೈಕರ್ ಅವರ ಪ್ರದರ್ಶನವನ್ನು ಅಭಿನಂದಿಸಿ, ಧನ್ಯವಾದ ಹೇಳಲು ಕವಾನಿ "ನೆಗ್ರಿಟೊ" ಎಂಬ ಪದವನ್ನು ಬಳಸಿದ್ದರು.

"ಮ್ಯಾಂಚೆಸ್ಟರ್ ಯುನೈಟೆಡ್ ಎಫ್‌ಸಿ ಸ್ಟ್ರೈಕರ್‌ನ ಇನ್​ಸ್ಟಾಗ್ರಾಮ್ ಪೋಸ್ಟ್ ಕಾಮೆಂಟ್ ಅವಮಾನಕರ, ನಿಂದನೀಯ, ಅನುಚಿತ ಮತ್ತು ಎಫ್‌ಎ ರೂಲ್ ಇ 3.1 ಗೆ ವಿರುದ್ಧವಾಗಿದ್ದು, ಆಟಕ್ಕೆ ಅಪಖ್ಯಾತಿಗೆ ತಂದಿದೆ. ಇದು ವರ್ಣ ಅಥವಾ ಜನಾಂಗ ಅಥವಾ ಜನಾಂಗೀಯ ಮೂಲದ ಬಗ್ಗೆ, ಸ್ಪಷ್ಟವಾಗಿ ಅಥವಾ ಸೂಚಿಸಿದ ಉಲ್ಲೇಖವನ್ನು ಒಳಗೊಂಡಿತ್ತು" ಎಂದು ಎಫ್‌ಎ ತನ್ನ ತೀರ್ಪಿನಲ್ಲಿ ಹೇಳಿದೆ.

ಆಸ್ಟನ್ ವಿಲ್ಲಾ ವಿರುದ್ಧದ ಪ್ರೀಮಿಯರ್ ಲೀಗ್ ಪಂದ್ಯ, ಮ್ಯಾಂಚೆಸ್ಟರ್ ಸಿಟಿ ವಿರುದ್ಧದ ಇಎಫ್ಎಲ್ ಕಪ್ ಸೆಮಿಫೈನಲ್ ಮತ್ತು ವ್ಯಾಟ್ಫೋರ್ಡ್ ಜೊತೆಗಿನ ಎಫ್ಎ ಕಪ್​ ಪಂದ್ಯದಲ್ಲಿ ಕವಾನಿ ಭಾಗವಹಿಸಲು ಸಾಧ್ಯವಿಲ್ಲ.

ABOUT THE AUTHOR

...view details