ಮಿನೇರೊ (ಬ್ರೆಜಿಲ್):ಫುಟ್ಬಾಲ್ ದಿಗ್ಗಜ ರೊನಾಲ್ಡೊ ಅವಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಅವರ ಕ್ಲಬ್ ಕ್ರೂಝೈರೊ ಭಾನುವಾರ ದೃಢಪಡಿಸಿದೆ. ಇತ್ತೀಚೆಗಷ್ಟೇ 45 ವರ್ಷ ವಯಸ್ಸಿನ ರೊನಾಲ್ಡೊ ಬ್ರೆಜಿಲಿಯನ್ ಕ್ಲಬ್ ಕ್ರೂಝೈರೊ ಎಸ್ಪೋರ್ಟೆ ಕ್ಲಬ್ನಲ್ಲಿ ಬಹುಪಾಲು ಷೇರುಗಳನ್ನು ಖರೀದಿಸಿದ್ದರು.
ರೊನಾಲ್ಡೊ ಅವರು ಕ್ಲಬ್‌ನ 101ನೇ ವರ್ಷದ ವಾರ್ಷಿಕೋತ್ಸವದಲ್ಲಿ ಭಾಗವಹಿಸುವರು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೋವಿಡ್ ದೃಢಪಟ್ಟ ಹಿನ್ನೆಲೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಕ್ಲಬ್ ಭಾನುವಾರ ಟ್ವೀಟ್ ಮಾಡಿ ಮಾಹಿತಿ ನೀಡಿದೆ.