ಕರ್ನಾಟಕ

karnataka

ETV Bharat / sports

ನಾಯಕನಿಲ್ಲದೆ ಛೇಟ್ರಿ ಹುಡುಗರ ಪರಾಕ್ರಮ; ಕತಾರ್​ ವಿರುದ್ಧದ ಪಂದ್ಯ ಡ್ರಾ - ಭಾರತ ಫುಟ್​ಬಾಲ್ ಆಟಗಾರರು

ನಾಯಕ ಸುನೀಲ್ ಛೇಟ್ರಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಭಾರತ ಫುಟ್​ಬಾಲ್ ಆಟಗಾರರು ಕತಾರ್ ವಿರುದ್ಧ ಅದ್ಭುತ ಪ್ರದರ್ಶನ ತೋರಿದ್ದಾರೆ.

ಭಾರತ ಫುಟ್​ಬಾಲ್

By

Published : Sep 11, 2019, 7:22 PM IST

ದೊಹಾ: ಕತಾರ್ ವಿರುದ್ಧ ನಡೆದ ಫಿಫಾ ಫುಟ್​ಬಾಲ್​ ಕ್ವಾಲಿಫಯರ್‌ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರಿದ್ದು ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ.

ಜ್ವರದಿಂದ ಬಳಲುತ್ತಿರುವ ನಾಯಕ ಸುನೀಲ್ ಛೇಟ್ರಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಆಟಗಾರರು ಕತಾರ್ ವಿರುದ್ಧ ಅಮೋಘ ಆಟ ತೋರಿಸಿದ್ರು. ನಾಯಕನ ಸ್ಥಾನ ವಹಿಸಿಕೊಂಡ ಗೋಲ್​ ಕೀಪರ್ ಗುರ್ಪ್ರೀತ್ ಸಿಂಗ್ ಸಂಧು ಅದ್ಭುತ ಪ್ರದರ್ಶನ ನೀಡಿದರು. ತಂಡದ ಸದಸ್ಯರು ಕತಾರ್ ಆಟಗಾರರಿಗೆ ಒಂದು ಗೋಲ್​ ಗಳಿಸಲೂ ಬಿಡಲಿಲ್ಲ ಅನ್ನೋದೇ ವಿಶೇಷ. ಈ ಮೂಲಕ ಕತಾರ್ ವಿರುದ್ಧ ಸೋಲು ಕಾಣದ ಏಕೈಕ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಓಮನ್​ ವಿರುದ್ಧ 1-2 ಗೋಲುಗಳಲ್ಲಿ ಸೋಲು ಕಂಡಿದ್ದ ಭಾರತ, ಇದೀಗ ಗೆಲುವಿನ ಲಯ ಕಂಡುಕೊಂಡಿದೆ.

ಪಂದ್ಯ ಮುಗಿಯುತ್ತಿದ್ದಂತೆ ಟ್ವೀಟ್​ ಮಾಡಿರುವ ಛೇಟ್ರಿ ಆತ್ಮೀಯ ಭಾರತ, ಇದು ನನ್ನ ತಂಡ, ಇವರು ನನ್ನ ಹುಡುಗರು. ಈ ಕ್ಷಣದಲ್ಲಿ ನಾನು ಎಷ್ಟು ಹೆಮ್ಮೆ ಪಡುತ್ತೇನೆ ಎಂದು ವಿವರಿಸಲು ಸಾಧ್ಯವಿಲ್ಲ. ಇದೊಂದು ಉತ್ತಮ ಫಲಿತಾಂಶವಲ್ಲ, ಆದರೆ ಹೋರಾಟದ ವಿಷಯದಲ್ಲಿ ಇದು ದೊಡ್ಡ ಸಾಧನೆ. ಕೋಚಿಂಗ್ ಸಿಬ್ಬಂದಿ ಮತ್ತು ಡ್ರೆಸ್ಸಿಂಗ್ ಕೋಣೆಗೆ ಈ ಕ್ರೆಡಿಟ್ ಸಲ್ಲುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details