ಕರ್ನಾಟಕ

karnataka

ETV Bharat / sports

ಭಾರತ ಫುಟ್​ಬಾಲ್​ ತಂಡದ ನಾಯಕ ಚೆಟ್ರಿಗೆ ಅಭಿಮಾನಿಯಿಂದ ಬಂತು ವಿಚಿತ್ರ ಬೇಡಿಕೆಯ ಸಂದೇಶ! - ನೆಟ್​ಫ್ಲಿಕ್ಸ್​ ಅಕೌಂಟ್​ನ ಐಡಿ ಹಾಗೂ ಪಾಸ್​​ವರ್ಡ್

ದೇಶದೆಲ್ಲಡೆ ಕೊರೊನಾ ಲಾಕ್​ಡೌನ್​ ಜಾರಿಯಲ್ಲಿರುವುದರಿಂದ ಕ್ರೀಡಾಪಟುಗಳು ತಮ್ಮ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲಾತಾಣದಲ್ಲಿ ಕಳೆಯುತ್ತಿದ್ದಾರೆ. ಈ ವೇಳೆ ಚೆಟ್ರಿಗೆ ಫೇಸ್​ಬುಕ್​ ಖಾತೆ ಅಭಿಮಾನಿಯೊಬ್ಬ ವಿಚಿತ್ರ ಬೇಡಿಕೆ ಇಟ್ಟಿದ್ದಾನೆ.

ಸುನಿಲ್​ ಚೆಟ್ರಿ
ಸುನಿಲ್​ ಚೆಟ್ರಿ

By

Published : May 3, 2020, 3:00 PM IST

ನವದೆಹಲಿ: ಬಹುಪಾಲು ಅಭಿಮಾನಿಗಳು ತಮ್ಮ ಫೇವರಿಟ್​​ ಫುಟ್​ಬಾಲ್​ ಆಟಗಾರರ ಆಟೋಗ್ರಾಫ್​, ಜರ್ಸಿ ಕೇಳುವುದು ಸಾಮಾನ್ಯ ಸಂಗತಿ. ಆದರೆ ಶನಿವಾರ ಅಭಿಮಾನಿಯೊಬ್ಬ ಭಾರತ ಫುಟ್​ಬಾಲ್​ ತಂಡದ ನಾಯಕ ಸುನಿಲ್​ ಚೆಟ್ರಿಯವರ ನೆಟ್​ಫ್ಲಿಕ್ಸ್​ ಅಕೌಂಟ್​ನ ಐಡಿ ಹಾಗೂ ಪಾಸ್​ವರ್ಡ್​ ಕೇಳುವ ಮೂಲಕ ಆಶ್ಚರ್ಯ ಉಂಟು ಮಾಡಿದ್ದಾನೆ.

ದೇಶದೆಲ್ಲಡೆ ಕೊರೊನಾ ಲಾಕ್​ಡೌನ್​ ಜಾರಿಯಲ್ಲಿರುವುದರಿಂದ ಕ್ರೀಡಾಪಟುಗಳು ತಮ್ಮ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲಾತಾಣದಲ್ಲಿ ಕಳೆಯುತ್ತಿದ್ದಾರೆ. ಈ ವೇಳೆ ಚೆಟ್ರಿಗೆ ಫೇಸ್​ಬುಕ್​ ಖಾತೆ ಅಭಿಮಾನಿಯೊಬ್ಬ ವಿಚಿತ್ತೆ ಬೇಡಿಕೆ ಇಟ್ಟಿದ್ದಾನೆ.

"ಚೆಟ್ರಿ ಬಾಯ್​, ನಿಮ್ಮ ನೆಟ್​ಫ್ಲಿಕ್ಸ್​ ಯೂಸರ್​ ಐಡಿ ಹಾಗೂ ಪಾಸ್​ವರ್ಡ್​ ಕೊಡಿ. ಲಾಕ್​ಡೌನ್​ ಅವಧಿ ಮುಗಿದ ಮೇಲೆ ಬೇಕಾದರೆ ಬದಲಿಸಿಕೊಳ್ಳಿ "ಎಂದು ಸಂದೇಶ ಕಳುಹಿಸಿದ್ದಾರೆ.

ಈ ವಿಚಾರವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್​ನಲ್ಲಿ' ಜರ್ಸಿ, ಫೋಟೋ ​ ಮೇಲೆ ಆಟೋಗ್ರಾಫ್​, ಪೋಸ್ಟ್​ರ್​​ಗೆ ರಿಪ್ಲೆ ಮಾಡುವುದು ಹಾಗೂ ವಿಡಿಯೋ ವಿಶ್ ಮಾಡುವುದು ಇದೆಲ್ಲ ಬೇಡವಾಗಿದೆ'.

ಆದರೆ ಇಲ್ಲೊಬ್ಬ ವಿನೂತನ ಬೇಡಿಕೆ ಇಟ್ಟಿದ್ದಾನೆ. ನಾನು ಇದನ್ನು ನಿಜವಾಗಿಯೂ ಬೇಡಿಕೆಯನ್ನಾಗಿ ಪರಿಗಣಿಸಲು ಬಯಸುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಯ ವಿಚಿತ್ರ ಬೇಡಿಕೆಯ ವಿಷಯವನ್ನು ತಿಳಿಸಿದ್ದಾರೆ. ಈ ಟ್ವೀಟ್​ ಸಾನಿಯಾ ಮಿರ್ಜಾ ಹಾಗೂ ಸೈನಾ ನೆಹ್ವಾಲ್​ ಪ್ರತಿಕ್ರಿಯಿಸಿದ್ದಾರೆ.

ABOUT THE AUTHOR

...view details