ಮರ್ಗೋವಾ/ಗೋವಾ: ISL ಫುಟ್ಬಾಲ್ ಟೂರ್ನಿಯಲ್ಲಿ ಎಟಿಕೆ ಮೊಹುನ್ ಬಗಾನ್ ಹಾಗೂ ನಾರ್ತ್ ಈಸ್ಟ್ ತಂಡಗಳು ಮುಖಾಮುಖಿಯಾಗಲಿವೆ.
ISL ಫುಟ್ಬಾಲ್ ಟೂರ್ನಿ: ಸೆಮಿ ಫೈನಲ್ಸ್ನಲ್ಲಿ ಮುಖಾಮುಖಿಯಾಗಲಿವೆ ಎಟಿಕೆ, ನಾರ್ತ್ ಈಸ್ಟ್ ಮುಖಾಮುಖಿ - ಎಟಿಕೆ ಮೊಹುನ್ ಬಗನ್
ಗೋವಾದ ಫತ್ರೋಡಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ISL ಫುಟ್ಬಾಲ್ ಟೂರ್ನಿಯಲ್ಲಿ ಇಂದು ಎಟಿಕೆ ಮಹುನ್ ಬಗಾನ್ ಹಾಗೂ ನಾರ್ತ್ ಈಸ್ಟ್ ತಂಡಗಳು ಫೈನಲ್ ಪಂದ್ಯ ತಲುಪಲು ಮುಖಾಮುಖಿಯಾಗಲಿವೆ.
ಇಂದು ಫತ್ರೋಡಾ ಸ್ಟೇಡಿಯಂನಲ್ಲಿ ಎರಡೂ ತಂಡಗಳು ಫೈನಲ್ ತಲುಪಲು ಸೆಣಸಾಟ ನಡೆಸಲಿವೆ. ಕಳೆದ ಪಂದ್ಯದಲ್ಲಿ ಇದ್ರಿಸಾ ಸಿಲ್ಲಾ ಬಾರಿಸಿದ ಗೋಲಿನ ನೆರವಿನಿಂದ ನಾರ್ತ್ ಈಸ್ಟ್ ಮೊದಲ ಹಂತದಲ್ಲಿ 1-1ರ ಸಮಬಲವನ್ನು ಕಾಯ್ದುಕೊಳ್ಳಲು ಸಾಧ್ಯವಾಯ್ತು.
ಮುಖ್ಯ ತರಬೇತುದಾರ ಖಾಲಿದ್ ಜಮಿಲ್ ಅವರ ನೇತೃತ್ವದಲ್ಲಿ ಅಜೇಯರಾಗಿರುವ ನಾರ್ತ್‌ಈಸ್ಟ್‌ಗೆ, ಬಗಾನ್ ತಂಡವನ್ನು ಸೋಲಿಸಿದರೆ ಇದು ಅವರ ಮೊದಲ ಫೈನಲ್ ಪಂದ್ಯವಾಗಿದೆ. ಇದು ನಮಗೆ ಮಾಡು ಇಲ್ಲವೇ ಮಡಿ ಆಟವಾದ್ದರಿಂದ ಫಲಿತಾಂಶ ಪಡೆಯುವಲ್ಲಿ ನಾವು ಗಮನಹರಿಸಬೇಕಾಗಿದೆ. ಯಾವಾಗಲೂ ಒತ್ತಡವಿರುತ್ತದೆ. ಈ ಒತ್ತಡವನ್ನು ಆನಂದಿಸಲು ನಾನು ಹುಡುಗರಿಗೆ ಹೇಳಿದ್ದೇನೆ. ಎಂದು ಜಮಿಲ್ ಹೇಳಿದರು. ಎದುರಾಳಿಗಳನ್ನು ಒತ್ತಡಕ್ಕೆ ಒಳಪಡಿಸಿ ನಾವು ನಾವು ಹೆಚ್ಚಿನ ಸ್ಕೋರಿಂಗ್ ಅವಕಾಶಗಳನ್ನು ಸೃಷ್ಟಿಸಬೇಕಾಗುತ್ತದೆ ಎಂದು ಇದೇ ವೇಳೆ ಜಮಿಲ್ ಹೇಳಿದ್ರು.