ಬ್ಯೂನಸ್ (ಅರ್ಜೆಂಟೀನಾ): ಅರ್ಜೆಂಟೀನಾದ ಶ್ರೇಷ್ಠ ಫುಟ್ಬಾಲ್ ಆಟಗಾರ ಜೇವಿಯರ್ ಮಸ್ಚೆರಾನೋ ತಮ್ಮ 39ನೇ ವಯಸ್ಸಿನಲ್ಲಿ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ್ದಾರೆ.
ಲಾ ಅಲ್ಬಿಸೆಲೆಸ್ಟೆ ತಂಡದಲ್ಲಿ ಅತ್ಯಂತ ಹೆಚ್ಚು ಪಂದ್ಯವಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಮಿಡ್ ಫೀಲ್ಡರ್ ಆಗಿ ಗುರುತಿಸಿಕೊಂಡಿದ್ದ ಜೇವಿಯರ್, ರಿವರ್ ಪ್ಲೇಟ್, ಕೊರಿಂಥಿಯಾನ್ಸ್, ಲಿವರ್‌ಪೂಲ್ ಮತ್ತು ಬಾರ್ಸಿಲೋನಾ ತಂಡದ ಪರ ಹಾಗೂ ಇತರ ಕ್ಲಬ್‌ಗಳ ಪರವಾಗಿಯೂ ಮೈದಾನಕ್ಕಿಳಿದಿದ್ದರು.
ನಾನು ಶೇ.100ರಷ್ಟು ವೃತ್ತಿ ಜೀವಕ್ಕಾಗಿ ಬದುಕಿದ್ದೆ. ಕೆಲವೊಮ್ಮೆ ಅಂತ್ಯವನ್ನು ನಾವು ಆರಿಸಿಕೊಳ್ಳುವುದಿಲ್ಲ. ಸ್ವತಃ ಅದಾಗಿಯೇ ನಮಗೆ ಎದುರಾಗುತ್ತದೆ ಎಂದಿದ್ದಾರೆ. ಭಾನುವಾರ ನಡೆದ ಅರ್ಜೆಂಟೀನಾ ಜೂನಿಯರ್ಸ್ ವಿರುದ್ಧದ ಪಂದ್ಯದಲ್ಲಿ 1-0 ಅಂತರದ ಸೋಲು ಕಂಡ ಬಳಿಕ ಇವರು ಅಚ್ಚರಿಯ ವಿದಾಯ ಘೋಷಿಸಿದ್ದಾರೆ.
ಮಸ್ಟೆರಾನೋ ಬಾರ್ಸಿಲೋನಾ ಪರ ಆಡುವಾಗ 5 ಲಾ ಲಿಗಾಸ್, ಎರಡು ಚಾಂಪಿಯನ್ಸ್ ಲೀಗ್ ಸೇರಿದಂತೆ 8 ವರ್ಷದಲ್ಲಿ ಒಟ್ಟು 19 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.
ಅರ್ಜೆಂಟೀನಾ ಪರ 147 ಬಾರಿ ಆಡಿದ ಅವರು 4 ವಿಶ್ವಕಪ್ ಫೈನಲ್‌ಗಳಲ್ಲಿ ಕಾಣಿಸಿಕೊಂಡರು. 2004 ಮತ್ತು 2008ರಲ್ಲಿ ಅರ್ಜೆಂಟೀನಾದ ಒಲಿಂಪಿಕ್ ತಂಡದೊಂದಿಗೆ ಆಡಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.