ಕರ್ನಾಟಕ

karnataka

ETV Bharat / sports

ಬ್ರೆಜಿಲ್ ಮಣಿಸಿ 28 ವರ್ಷಗಳ ಬಳಿಕ ಕೋಪಾ ಅಮೆರಿಕಾ ಕಪ್ ಗೆದ್ದ ಮೆಸ್ಸಿ ಪಡೆ - 28 ವರ್ಷಗಳ ಬಳಿಕ ಕೋಪಾ ಅಮೆರಿಕಾ ಕಪ್ ಗೆದ್ದ ಅರ್ಜೆಂಟೀನಾ

ಭಾನುವಾರ ಬ್ರೆಜಿಲ್​ನ ರಿಯೋ ಡಿ ಜನೇರಿಯೋದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಗೆದ್ದು ಬೀಗಿದೆ. 22ನೇ ನಿಮಿಷದಲ್ಲಿ ಏಂಜಲ್ ಡಿ ಮರಿಯಾ ಗೋಲು ಬಾರಿಸುವ ಮೂಲಕ ಅರ್ಜಿಂಟೀನಾದ 28 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿದರು.

ಕೋಪಾ ಅಮೆರಿಕಾ
ಕೋಪಾ ಅಮೆರಿಕಾ

By

Published : Jul 11, 2021, 8:23 AM IST

Updated : Jul 11, 2021, 10:53 AM IST

ರಿಯೋ ಡಿ ಜನೈರೋ(ಬೆಜಿಲ್): ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಬಲಿಷ್ಠ ಬ್ರೆಜಿಲ್ ತಂಡವನ್ನು 1-0ಯಿಂದ ಮಣಿಸಿ ಕೋಪಾ ಅಮೆರಿಕಾ ಟ್ರೋಫಿ ಎತ್ತಿ ಹಿಡಿದಿದೆ. 1993ರ ನಂತರ ಅರ್ಜೆಂಟೀನಾ ಗೆದ್ದ ಪ್ರಮುಖ ಟ್ರೋಫಿ ಇದಾಗಿದೆ.

ಭಾನುವಾರ ಬ್ರೆಜಿಲ್​ನ ರಿಯೋ ಡಿ ಜನೈರೋದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಗೆದ್ದು ಬೀಗಿದೆ. 22ನೇ ನಿಮಿಷದಲ್ಲಿ ಏಂಜಲ್ ಡಿ ಮರಿಯಾ ಗೋಲು ಬಾರಿಸುವ ಮೂಲಕ ಅರ್ಜಿಂಟೀನಾದ 28 ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿದರು.

ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ ಶ್ರೇಷ್ಠ ಆಟಗಾರ ಎಂದೇ ಕರೆಯಲ್ಪಡುವ ಲಿಯೋನಲ್ ಮೆಸ್ಸಿ ವೃತ್ತಿ ಜೀವನದಲ್ಲಿ ತಮ್ಮ ರಾಷ್ಟ್ರೀಯ ತಂಡಕ್ಕಾಗಿ ಒಂದೇ ಒಂದು ಪ್ರತಿಷ್ಠಿತ ಪ್ರಶಸ್ತಿ ಗೆದ್ದಿಲ್ಲ ಎನ್ನುವ ಅಪವಾದವಿತ್ತು. ಆದರೆ ಆ ಕೊರಗು ಇಂದು ಕೋಪಾ ಅಮೇರಿಕಾ ಕಪ್ ಗೆಲ್ಲುವ ಮೂಲಕ ಅಂತ್ಯಗೊಂಡಿದೆ.

ಅರ್ಜೆಂಟೀನಾ 1993ರಲ್ಲಿ ಮೆಕ್ಸಿಕೊ ತಂಡವನ್ನು ಮಣಿಸಿ ಕೊನೆಯ ಬಾರಿ ಕೋಪಾ ಅಮೆರಿಕಾ ಪ್ರಶಸ್ತಿ ಜಯಿಸಿತ್ತು. ನಂತರ 4 ಬಾರಿ ಫೈನಲ್ ಪ್ರವೇಶಿಸಿದರೂ ಪ್ರಶಸ್ತಿ ಗೆಲ್ಲಲು ವಿಫಲವಾಗಿವಾಗಿತ್ತು. 2004 ಮತ್ತು 2007ರಲ್ಲಿ ಬ್ರೆಜಿಲ್ ವಿರುದ್ಧ ಸೋತರೆ, 2015 ಮತ್ತು 2016ರಲ್ಲಿ ಚಿಲಿ ವಿರುದ್ಧ ಪೆನಾಲ್ಟಿ ಶೂಟೌಟ್​ನಲ್ಲಿ ಸೋಲು ಕಂಡಿತ್ತು.

ಅರ್ಜೆಂಟೀನಾ ಕೋಪಾ ಅಮೆರಿಕಾ ಇತಿಹಾಸದಲ್ಲಿ ತನ್ನ 15ನೇ ಟ್ರೋಫಿ ಗೆಲ್ಲುವ ಮೂಲಕ ಉರುಗ್ವೆ ಜೊತೆಗೆ ಅತಿ ಹೆಚ್ಚು ಪ್ರಶಸ್ತಿ ಗೆದ್ದ ದಾಖಲೆಯನ್ನು ಹಂಚಿಕೊಂಡಿತು. ಬ್ರೆಜಿಲ್ 9 ಪ್ರಶಸ್ತಿಗಳೊಂದಿಗೆ 2ನೇ ಸ್ಥಾನದಲ್ಲಿದೆ.

ಇದನ್ನು ಓದಿ:Wimbledon 2021: ಕರೋಲಿನಾ ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದ ಆ್ಯಶ್ಲಿ ಬಾರ್ಟಿ

Last Updated : Jul 11, 2021, 10:53 AM IST

ABOUT THE AUTHOR

...view details