ಕರ್ನಾಟಕ

karnataka

ETV Bharat / sports

ಲಾಕ್​ಡೌನ್​: ಮುಂಬೈ ವಿಮಾನ ನಿಲ್ದಾಣದಲ್ಲಿ 74 ದಿನ ಕಳೆದ ಫುಟ್​ಬಾಲ್​ ಆಟಗಾರ! - ಘಾನಾ ಫುಟ್​ಬಾಲ್​ ಆಟಗಾರ

ಶಿವಸೇನೆಯ ಯುವ ವಿಭಾಗವಾದ ಯುವಸೇನೆಯ ಸಹಾಯದಿಂದ ಮುಲ್ಲರ್​ ಸ್ಥಳೀಯ ಹೋಟೆಲ್​ಗೆ ಸ್ಥಳಾಂತರಗೊಂಡಿದ್ದಾರೆ. ವಿಮಾನಯಾನ ಪುನರಾರಂಭವಾಗುತ್ತಲೇ ಅವರು ತವರು ದೇಶಕ್ಕೆ ತೆರಳಲಿದ್ದಾರೆ.

After 74 days at airport, stranded footballer shifted to hotel
ಜುವಾನ್ ಮುಲ್ಲರ್

By

Published : Jun 7, 2020, 1:08 PM IST

ಮುಂಬೈ: ಹಾಲಿವುಡ್​ ಚಿತ್ರದ 'ದಿ ಟರ್ಮಿನಲ್' ನಲ್ಲಿ ಟಾಮ್ ಹ್ಯಾಂಕ್ ಪಾತ್ರದಂತೆಯೇ 23 ವರ್ಷದ ಘಾನಾದ ಫುಟ್ಬಾಲ್ ಆಟಗಾರ ರ‍್ಯಾಂಡಿ ಜುವಾನ್ ಮುಲ್ಲರ್ ಕೊರೊನಾ ಲಾಕ್​ಡೌನ್ ಹಿನ್ನೆಲೆ​ಯಲ್ಲಿ 74 ದಿನಗಳ ಕಾಲ ಮುಂಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿ ಕಾಲ ಕಳೆದಿದ್ದಾರೆ.

ಶಿವಸೇನೆ ಪಕ್ಷದ ಯುವ ವಿಭಾಗವಾದ ಯುವಸೇನೆಯ ಸಹಾಯದಿಂದ ಮುಲ್ಲರ್​ ಅವರು ಸ್ಥಳೀಯ ಹೋಟೆಲ್​ಗೆ ಸ್ಥಳಾಂತರಗೊಂಡಿದ್ದಾರೆ. ವಿಮಾನಯಾನ ಪುನಾರಾರಂಭವಾದ ನಂತರ ಅವರು ತವರಿಗೆ ಮರಳಲಿದ್ದಾರೆ.

ಐಎಸ್​ಎಲ್​ನಲ್ಲಿ ಕೇರಳದ ಪರ ಆಡುವ ಮುಲ್ಲರ್​, ತಮಗೆ ಸಹಾಯ ಮಾಡಿದ್ದಕ್ಕೆ ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಹಾಗೂ ಯುವ ಸೇನೆಯ ಅಧ್ಯಕ್ಷ ರಾಹುಲ್​ ಕನಾಲ್​ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಘಾನಾ ದೇಶದ ಫುಟ್ಬಾಲ್ ಆಟರಗಾರ ಜುವಾನ್ ಮುಲ್ಲರ್

ಆದಿತ್ಯ ಠಾಕ್ರೆ, ರಾಹುಲ್ ಕನಾಲ್ ಅವರಿಗೆ ತುಂಬಾ ಧನ್ಯವಾದಗಳು. ನೀವು ಮಾಡಿದ ಸಹಾಯವನ್ನು ನಾನು ಪ್ರಶಂಸಿಸುತ್ತೇನೆ ಎಂದು ಮುಲ್ಲರ್​ ಹೇಳಿದ್ದಾರೆ.

ಘಾನಾ ರಾಷ್ಟ್ರೀಯ ತಂಡದ ಆಟಗಾರನಾಗಿರುವ ಈತ​, ಕೇರಳ ಮೂಲದ ಫುಟ್​ಬಾಲ್​ ಕ್ಲಬ್​ನಲ್ಲಿ ಅಡುತ್ತಿದ್ದರು. ಅವರು ಕೀನ್ಯಾ ಏರ್​ಲೈನ್ಸ್​ ಮೂಲಕ ತವರಿಗೆ ತೆರಳಲು ನಿರ್ಧರಿಸಿದ್ದರು. ಆದರೆ ಕೊರೊನಾ ಲಾಕ್​ಡೌನ್​ ಘೋಷಣೆಯಾದ ಸಂದರ್ಭದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.

ಮುಲ್ಲರ್ ಮುಂಬೈ ವಿಮಾನ ನಿಲ್ದಾಣದಲ್ಲಿ ನೆಲೆಸಿದ್ದು ಸಣ್ಣಪುಟ್ಟ ಅಂಗಡಿಗಳಿಂದ ಆಹಾರ ಖರೀದಿಸಿ ನಿಲ್ದಾಣದ ಸಿಬ್ಬಂದಿಯೊಂದಿಗೆ ಸಮಯ ಕಳೆದಿದ್ದಾರೆ. ಇಲ್ಲಿನ ಸಿಬ್ಬಂದಿ ಅವರಿಗೆ ತುಂಬಾ ಸಹಾಯ ಮಾಡಿದ್ದಾರೆ ಎಂದು ಕನಾಲ್ ಹೇಳಿದ್ದಾರೆ.

ಈ ಫುಟ್​ಬಾಲ್​ ಆಟಗಾರನ ಅವ್ಯವಸ್ಥೆ ಕಂಡು ಅದನ್ನು ಟ್ವಿಟರ್​ ಬಳಕೆದಾರನೊಬ್ಬ ಆದಿತ್ಯ ಠಾಕ್ರೆ ಗಮನಕ್ಕೆ ತಂದಿದ್ದರು. ನಂತರ ಕನಾಲ್​ ಮುಲ್ಲರ್​ ಅವರನ್ನು ಭೇಟಿ ಮಾಡಿ ಹೋಟೆಲ್​ಗೆ ತಲುಪಲು ಸಹಾಯ ಮಾಡಿದ್ದಾರೆ.

ABOUT THE AUTHOR

...view details