ಕರ್ನಾಟಕ

karnataka

ETV Bharat / sports

ಕರ್ನಾಟಕ ಮಾಜಿ ಫುಟ್​ಬಾಲರ್ ಮತ್ತು ರಾಷ್ಟ್ರೀಯ ಕೋಚ್​ ಎಸ್​ಎಸ್​ ಹಕೀಂ ನಿಧನ​

82 ವರ್ಷದ ಹಕೀಮ್​ 1960ರ ರೋಮ್​ ಒಲಿಂಪಿಕ್ಸ್​ನಲ್ಲಿ ಪಾಲ್ಗೊಂಡಿದ್ದ ಭಾರತ ತಂಡದ ಸದಸ್ಯರಾಗಿದ್ದರು. ಅವರನ್ನು ಹಕೀಂ ಸಾಬ್ ಎಂದೇ ಕರೆಯಲಾಗುತ್ತಿತ್ತು. ಅವರು ಇತ್ತೀಗಷ್ಟೆ ಲಕ್ವ ಹೊಡೆದು ಗುಲ್ಬಾರ್ಗದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

SS Hakim dead
ಮಾಜಿ ಫುಟ್​ಬಾಲಿಗ ಹಕೀಂ ನಿಧನ

By

Published : Aug 22, 2021, 4:27 PM IST

ನವದೆಹಲಿ: ಭಾರತ ತಂಡದ ಮಾಜಿ ಪುಟ್​ಬಾಲರ್​ ಮತ್ತು ಒಲಿಂಪಿಕ್ಸ್​ನಲ್ಲಿ ಕೊನೆಯಬಾರಿ ಪಾಲ್ಗೊಂಡಿದ್ದ ಭಾರತ ತಂಡದಲ್ಲಿದ್ದ ಸಯ್ಯದ್​ ಶಾಹೀದ್ ಹಕೀಂ​ ಭಾನುವಾರ ಕಲಬುರಗಿಯ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

82 ವರ್ಷದ ಹಕೀಂ​ 1960ರ ರೋಮ್​ ಒಲಿಂಪಿಕ್ಸ್​ನಲ್ಲಿ ಪಾಲ್ಗೊಂಡಿದ್ದ ಭಾರತ ತಂಡದ ಸದಸ್ಯರಾಗಿದ್ದರು. ಅವರನ್ನು ಹಕೀಮ್ ಸಾಬ್ ಎಂದೇ ಕರೆಯಲಾಗುತ್ತಿತ್ತು. ಅವರು ಇತ್ತೀಗಷ್ಟೆ ಲಕ್ವ ಹೊಡೆದು ಗುಲ್ಬಾರ್ಗದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

ಹಕೀಂ ಭಾರತೀಯ ಫುಟ್​ಬಾಲ್​ನೊಂದಿಗೆ ಸುಮಾರು 5 ದಶಕದ ನಂಟು ಹೊಂದಿದ್ದರು. 1982 ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ದಿವಂಗತ ಪಿಕೆ ಬ್ಯಾನರ್ಜಿ ಅವರಿಗೆ ಸಹಾಯಕ ತರಬೇತುದಾರರಾಗಿದ್ದರು ಮತ್ತು ಮೆರ್ಡೆಕಾದಲ್ಲಿ ನಡೆದ ಟೂರ್ನಮೆಂಟ್​ನಲ್ಲಿ ರಾಷ್ಟ್ರೀಯ ತಂಡದ ಉಸ್ತುವಾರಿ ವಹಿಸಿದ್ದರು.

ಹಕೀಂ ಫಿಫಾ ಬ್ಯಾಡ್ಜ್ ಹೋಲ್ಡರ್ ಅಂತಾರಾಷ್ಟ್ರೀಯ ತೀರ್ಪುಗಾರರಾಗಿದ್ದು, ಏಷ್ಯನ್ ಕ್ಲಬ್ ಕಪ್ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಇವರಿಗೆ ದ್ರೋಣಾಚಾರ್ಯ ಪ್ರಶಸ್ತಿ ಮತ್ತು ಪ್ರತಿಷ್ಠಿತ ಧ್ಯಾನ್ ಚಂದ್ ಪ್ರಶಸ್ತಿ ಪಡೆದಿದ್ದಾರೆ.

ಇದನ್ನು ಓದಿ:ಹೆಣ್ಣು ಮಗುವಿಗೆ ಜನ್ಮ ನೀಡಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್ ​ಪತ್ನಿ!

ABOUT THE AUTHOR

...view details