ಮಾಲೆ :ನಾಯಕ ಚೆಟ್ರಿ ಅವರ 76ನೇ ಅಂತಾರಾಷ್ಟ್ರೀಯ ಗೋಲಿನ ಹೊರತಾಗಿಯೂ ಭಾರತ ತಂಡ ಎಸ್ಎಎಫ್ಎಫ್ ಚಾಂಪಿಯನ್ಶಿಪ್ನಲ್ಲಿ (SAFF Championships) ಸೋಮವಾರ ಬಾಂಗ್ಲಾದೇಶದ ವಿರುದ್ಧ 1-1ರಲ್ಲಿ ಡ್ರಾ ಸಾಧಿಸಿದೆ.
ಭಾರತದ 121ನೇ ಪಂದ್ಯವನ್ನಾಡುತ್ತಿರುವ 37 ವರ್ಷದ ಸುನೀಲ್ ಚೆಟ್ರಿ 27ನೇ ನಿಮಿಷದಲ್ಲಿ ಗೋಲು ಸಿಡಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಚೆಟ್ರಿ ಇನ್ನೊಂದು ಗೋಲುಗಳಿಸಿದರೆ ಬ್ರೆಜಿಲ್ನ ಪೀಲೆ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.