ಮುಂಬೈ: ಆಗಸ್ಟ್ 18ರಿಂದ ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಮೂರು ಏಕದಿನ ಸರಣಿಗಳ ಕ್ರಿಕೆಟ್ ಪಂದ್ಯ ಆಡಲಿದೆ. ಅದಕ್ಕಾಗಿ ಬಿಸಿಸಿಐ ಈಗಾಗಲೇ ಶಿಖರ್ ಧವನ್ ನಾಯಕತ್ವದ ತಂಡ ಪ್ರಕಟಿಸಿದ್ದಾರೆ. ಆದರೆ, ಕೋವಿಡ್ನಿಂದ ಸಂಪೂರ್ಣವಾಗಿ ಕೆ ಎಲ್ ರಾಹುಲ್ ಗುಣಮುಖರಾಗಿರುವ ಕಾರಣ ತಂಡ ಸೇರ್ಪಡೆಯಾಗಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.
ಯೋ ಯೋ ಫಿಟ್ನೆಸ್ ಪಾಸ್ ಮಾಡಿರುವ ಕಾರಣ ರಾಹುಲ್ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಯಲಿದ್ದು, ಟೀಂ ಇಂಡಿಯಾ ಮುನ್ನಡೆಸಲಿದ್ದಾರೆ. ಹೀಗಾಗಿ, ನಾಯಕತ್ವ ಜವಾಬ್ದಾರಿ ಹೊತ್ತುಕೊಂಡಿದ್ದ ಶಿಖರ್ ಧವನ್ ಇದೀಗ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. 2022 ಐಪಿಎಲ್ ಮುಕ್ತಾಯಗೊಂಡಾಗಿನಿಂದಲೂ ರಾಹುಲ್ ಯಾವುದೇ ರೀತಿಯ ಕ್ರಿಕೆಟ್ ಪಂದ್ಯಗಳಲ್ಲಿ ಭಾಗಿಯಾಗಿಲ್ಲ. ಏಷ್ಯಾಕಪ್ನಲ್ಲಿ ಅವರಿಗೆ ಸ್ಥಾನ ನೀಡಿರುವ ಕಾರಣ ಜಿಂಬಾಬ್ವೆ ಸರಣಿ ಅವರಿಗೆ ಮಹತ್ವದಾಗಿದೆ.
ಜಿಂಬಾಬ್ವೆ ವಿರುದ್ಧ ಸರಣಿಗೋಸ್ಕರ ಭಾರತೀಯ ಆಯ್ಕೆ ಸಮಿತಿ ಜುಲೈ 30ರಂದು ತಂಡ ಪ್ರಕಟಿಸಿತ್ತು. ಕೋವಿಡ್ನಿಂದಾಗಿ ರಾಹುಲ್ಗೆ ಮಣೆ ಹಾಕಿರಲಿಲ್ಲ. ಆದರೆ, ಇದೀಗ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರಿಂದ ಕಣಕ್ಕಿಳಿಯಲಿದ್ದಾರೆ. 2022 ಐಪಿಎಲ್ ಬಳಿಕ ರಾಹುಲ್ ಯಾವುದೇ ರೀತಿಯ ಸ್ಪರ್ಧಾತ್ಮಕ ಕ್ರಿಕಟ್ನಲ್ಲಿ ಭಾಗಿಯಾಗಿಲ್ಲ. ಮುಂಬರುವ ಏಷ್ಯಾಕಪ್ನಲ್ಲಿ ಅವಕಾಶ ನೀಡಿರುವ ಕಾರಣ ಈ ಸರಣಿ ಅವರಿಗೆ ಮಹತ್ವದಾಗಿದೆ.
ಇದನ್ನೂ ಓದಿ:ಜಿಂಬಾಬ್ವೆ ವಿರುದ್ಧದ ODI ಸರಣಿಗೆ ಟೀಂ ಇಂಡಿಯಾ ಪ್ರಕಟ.. ಕೊಹ್ಲಿ, ಬುಮ್ರಾ, ಪಂತ್ಗೆ ವಿಶ್ರಾಂತಿ