ಕರ್ನಾಟಕ

karnataka

ETV Bharat / sports

Zim vs Ind 3rd ODI: ಜಿಂಬಾಬ್ವೆ ವಿರುದ್ಧ ಭಾರತ ಬ್ಯಾಟಿಂಗ್‌ ಆಯ್ಕೆ, ಸರಣಿ ಕ್ಲೀನ್ ಸ್ವೀಪ್‌ ಗುರಿ - ಈಟಿವಿ ಭಾರತ ಕನ್ನಡ ನ್ಯೂಸ್​

ಜಿಂಬಾಬ್ವೆ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ.

india-opt-to-bat
ಟಾಸ್​ ಗೆದ್ದ ಭಾರತ ಬ್ಯಾಟಿಂಗ್​ ಆಯ್ಕೆ

By

Published : Aug 22, 2022, 12:39 PM IST

Updated : Aug 22, 2022, 1:49 PM IST

ಹರಾರೆ:ಜಿಂಬಾಬ್ವೆ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ. 2-0 ರಿಂದ ಸರಣಿ ಗೆದ್ದಿರುವ ಭಾರತಕ್ಕಿದು ಔಪಚಾರಿಕ ಪಂದ್ಯವಾಗಿದೆ. ಬಾಂಗ್ಲಾ ವಿರುದ್ಧ ಸರಣಿ ಗೆದ್ದಿರುವ ಆತಿಥೇಯರು ಕೊನೆಯ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಕೊನೆಯ ಪಂದ್ಯದಲ್ಲಿ ಭಾರತ 2 ಬದಲಾವಣೆ ಮಾಡಿದೆ. ಮಹಮದ್​ ಸಿರಾಜ್​ ಮತ್ತು ಪ್ರಸಿದ್ಧ ಕೃಷ್ಣ ಬದಲಾಗಿ ದೀಪಕ್​ ಚಹರ್​, ಆವೇಶ್​ ಖಾನ್​ಗೆ ಅವಕಾಶ ಸಿಕ್ಕಿದೆ. ದೀಪಕ್​ ಚಹರ್​ ಮೊದಲ ಪಂದ್ಯದಲ್ಲಿ ಆಡಿ 3 ವಿಕೆಟ್​ ಪಡೆದಿದ್ದರು.

ತಂಡಗಳು ಇಂತಿವೆ: ಭಾರತ:ಶಿಖರ್ ಧವನ್, ಕೆ.ಎಲ್. ರಾಹುಲ್(ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸಂಜು ಸ್ಯಾಮ್ಸನ್, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್​, ಕುಲದೀಪ್ ಯಾದವ್, ಅವೇಶ್ ಖಾನ್.

ಜಿಂಬಾಬ್ವೆ:ತಕು​ದ್ಜ್ವಾನ್​ಶೆ ಕೈಟಾನೊ, ಇನೋಸೆಂಟ್ ಕೈಯಾ, ಟೋನಿ ಮುನ್ಯೊಂಗಾ, ರೆಗಿಸ್ ಚಕಬ್ವಾ, ಸಿಕಂದರ್ ರಾಜಾ, ಸೀನ್ ವಿಲಿಯಮ್ಸ್, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯಾಯುಚಿ, ರಿಚರ್ಡ್ ನ್ಯಾಗರವ್​.

ಇದನ್ನೂ ಓದಿ:ಕಳೆದ 8 ಏಷ್ಯಾಕಪ್‌ ಕ್ರಿಕೆಟ್‌ ಸಮರ ಹೇಗಿತ್ತು? ಈ ಸಲವೂ ಕಪ್‌ ನಮ್ದೇನಾ? ಕಂಪ್ಲೀಟ್‌ ಡೀಟೆಲ್ಸ್‌

Last Updated : Aug 22, 2022, 1:49 PM IST

ABOUT THE AUTHOR

...view details