ಹರಾರೆ:ಸತತ ಸರಣಿ ಗೆದ್ದು ಬೀಗುತ್ತಿರುವ ಭಾರತ ತಂಡ ಕನ್ನಡಿಗ ಕೆ.ಎಲ್ ರಾಹುಲ್ ನೇತೃತ್ವದಲ್ಲಿ ಜಿಂಬಾಬ್ವೆ ವಿರುದ್ಧ ಮೊದಲ ಏಕದಿನ ಪಂದ್ಯವನ್ನಾಡುತ್ತಿದೆ. ಗಾಯದ ಬಳಿಕ ಬಹುದಿನಗಳ ನಂತರ ತಂಡಕ್ಕೆ ವಾಪಸ್ ಆಗಿರುವ ರಾಹುಲ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡು ಜಿಂಬಾಬ್ವೆಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು.
ಇದಕ್ಕೂ ಮೊದಲು ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಸರಣಿಯಲ್ಲಿ ಗೆದ್ದ ಆತ್ಮವಿಶ್ವಾಸದಲ್ಲಿರುವ ಜಿಂಬಾಬ್ವೆ ಭಾರತದ ವಿರುದ್ಧ ಗೆಲ್ಲುವ ಉತ್ಸಾಹದಲ್ಲಿದೆ. ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ತಂಡ 2 ವಿಕೆಟ್ ಕಳೆದುಕೊಂಡು 27 ರನ್ ಮಾಡಿದೆ. ಗಾಯಕ್ಕೀಡಾಗಿ ತಂಡಕ್ಕೆ ವಾಪಸ್ ಆಗಿರುವ ದೀಪಕ್ ಚಹರ್ 2 ವಿಕೆಟ್ ಉರುಳಿಸಿದರು. ವೆಸ್ಲೇ ಮಧವೆರೆ ಮತ್ತು ಸೀನ್ ವಿಲಿಯಮ್ಸನ್ ಕ್ರೀಸ್ನಲ್ಲಿದ್ದಾರೆ.