ದುಬೈ:ಜಿಂಬಾಬ್ವೆ ತಂಡದ ಬೌಲರ್ ರಾಯ್ ಕೈಯಾ ಅವರನ್ನು ಅನುಮಾಸ್ಪಾದ ಬೌಲಿಂಗ್ ಆರೋಪದ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಐಸಿಸಿ ಅಮಾನತುಗೊಳಿಸಿದೆ. 29 ವರ್ಷದ ಜಿಂಬಾಬ್ವೆ ಆಫ್ ಸ್ಪಿನ್ನರ್ ಕಳೆದ ತಿಂಗಳು ಬಾಂಗ್ಲಾದೇಶದ ವಿರುದ್ಧ ನಡೆದಿದ್ದ ಏಕೈಕ ಟೆಸ್ಟ್ ಪಂದ್ಯದ ವೇಳೆ ಶಂಕಾಸ್ಪದ ಬೌಲಿಂಗ್ ಮಾಡಿರುವುದಾಗಿ ವರದಿ ಮಾಡಲಾಗಿತ್ತು.
ಐಸಿಸಿ ತಜ್ಞರ ಸಮಿತಿ ರಾಯ್ ಬೌಲಿಂಗ್ ಪರಾಮಾರ್ಶಿಸಿ, ಆವರ ಬೌಲಿಂಗ್ ಡಿಲಿವೆರಿ ಅನುಮತಿಸಿರುವ 15 ಡಿಗ್ರಿ ಮೀರಿದ್ದು, ಕಾನೂನಬಾಹಿರ ಎಂಬ ಈ ತೀರ್ಮಾನವನ್ನು ತೆಗೆದುಕೊಂಡಿದೆ. ಐಸಿಸಿ ನಿಯಾಮಾವಳಿಗಳ ಪ್ರಕಾರ 29 ವರ್ಷದ ಬೌಲರ್ ತಮ್ಮ ಬೌಲಿಂಗ್ನಲ್ಲಿ ಬದಲಾವಣೆ ಮಾಡಿಕೊಂಡ ನಂತರ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.