ಕರ್ನಾಟಕ

karnataka

ETV Bharat / sports

ಟಿ20ಯಲ್ಲಿ 64 ರನ್​ ಬಿಟ್ಟುಕೊಟ್ಟು ಕುಗ್ಗಿದಾಗಲೂ ಧೋನಿ ನನ್ನ ಬೆಂಬಲಕ್ಕೆ ನಿಂತಿದ್ದರು : ಯಜ್ವೇಂದ್ರ ಚಹಲ್ - ರವಿಚಂದ್ರನ್ ಅಶ್ವಿನ್ ಚಹಲ್ ಸಂದರ್ಶನ

ಭಾರತ ತಂಡದ ಹಿರಿಯ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​ ಅವರ ಯೂಟ್ಯೂಬ್​ ಚಾನೆಲ್​ನ ಚರ್ಚೆಯಲ್ಲಿ ಭಾಗವಹಿಸಿದ್ದ ಚಹಲ್, ಧೋನಿ ಹೇಗೆ ತಮ್ಮನ್ನು ಬೆಂಬಲಿಸಿ ಆತ್ಮವಿಶ್ವಾಸ ತುಂಬುತ್ತಿದ್ದರು ಎನ್ನುವುದನ್ನ 2018ರ ದಕ್ಷಿಣ ಆಫ್ರಿಕಾ ಪ್ರವಾಸದ ಒಂದು ಘಟನೆಯ ಮೂಲಕ ತಿಳಿಸಿದ್ದಾರೆ..

Yuzvendra chahal and Dhoni
ಎಂಎಸ್​ ಧೋನಿ ಯುಜ್ವೇಂದ್ರ ಚಹಲ್

By

Published : Feb 2, 2022, 4:32 PM IST

ಮುಂಬೈ :ಭಾರತ ಸ್ಪಿನ್ನರ್​ಗಳಾದ ಯಜ್ವೇಂದ್ರ ಚಹಲ್ ಮತ್ತು ಕುಲ್ದೀಪ್​ ಯಾದವ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬೆಳೆಯುವುದರಲ್ಲಿ ಮಾಜಿ ನಾಯಕ ಎಂಎಸ್​ ಧೋನಿ ಪಾತ್ರ ಮಹತ್ವವಾಗಿತ್ತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಇಬ್ಬರು ಧೋನಿ ಭಾರತ ತಂಡದಲ್ಲಿ ಆಡುವ ವೇಳೆ ಅದ್ವಿತೀಯ ಯಶಸ್ಸು ಸಾಧಿಸಿ ಭಾರತಕ್ಕೆ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು.

ಭಾರತ ತಂಡದ ಹಿರಿಯ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​ ಅವರ ಯೂಟ್ಯೂಬ್​ ಚಾನೆಲ್​ನ ಚರ್ಚೆಯಲ್ಲಿ ಭಾಗವಹಿಸಿದ್ದ ಚಹಲ್​, ಧೋನಿ ಹೇಗೆ ತಮ್ಮನ್ನು ಬೆಂಬಲಿಸಿ, ಆತ್ಮವಿಶ್ವಾಸ ತುಂಬುತ್ತಿದ್ದರು ಎನ್ನುವುದನ್ನ 2018ರ ದಕ್ಷಿಣ ಆಫ್ರಿಕಾ ಪ್ರವಾಸದ ಒಂದು ಘಟನೆಯ ಮೂಲಕ ತಿಳಿಸಿದ್ದಾರೆ.

2108ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಪಂದ್ಯದಲ್ಲಿ 64 ರನ್​ ಹೊಡೆಸಿಕೊಂಡಿದ್ದೆ. ಹೆನ್ರಿಚ್​ ಕ್ಲಾಸೆನ್​ ನನ್ನ ಬೌಲಿಂಗ್​ನಲ್ಲಿ ಮೈದಾನದ ತುಂಬೆಲ್ಲಾ ದಂಡಿಸಿದ್ದರು. ಆಗ ಧೋನಿ ಭಾಯ್​ ನನಗೆ ಅರೌಂಡ್‌ದ ವಿಕೆಟ್​ ಬೌಲಿಂಗ್ ಮಾಡಲು ಹೇಳಿದರು.

ನಾನು ಅದೇ ರೀತಿ ಬೌಲಿಂಗ್ ಮಾಡಿದೆ, ಆದರೂ ಆತ ಮಿಡ್​ ವಿಕೆಟ್​ನಲ್ಲಿ ದೊಡ್ಡ ಸಿಕ್ಸರ್ ಬಾರಿಸಿದರು. ಮತ್ತೆ ಧೋನಿ ನನ್ನ ಬಳಿ ಬಂದರು. ಮಹಿ ಭಾಯ್​, ಈಗ ನಾನೇನು ಮಾಡಲಿ? ಎಂದು ಕೇಳಿದೆ. ಅದಕ್ಕೆ ಅವರು ಏನೂ ಇಲ್ಲ, ನಾನು ಸುಮ್ಮನೇ ಬಂದೆ ಎಂದು ತಿಳಿಸಿದರು.

ಇದನ್ನೂ ಓದಿ:ಕಿವೀಸ್​ನ ಡೆರಿಲ್ ಮಿಚೆಲ್​ಗೆ 2021ರ ಐಸಿಸಿ ಕ್ರೀಡಾಸ್ಪೂರ್ತಿ ಪ್ರಶಸ್ತಿ.. ಟಿ20 ವಿಶ್ವಕಪ್​ನಲ್ಲಿ ತೋರಿದ ಸನ್ನಡೆತೆಗೆ ಗೌರವ

ನಂತರ ಅವರು, ಈ ದಿನ ನಿನ್ನದಲ್ಲ, ನೀನು ಎಲ್ಲಾ ಪ್ರಯತ್ನ ಮಾಡಿದ್ದೀಯಾ. ಆದರೆ, ಏನೂ ಮಾಡಲಾಗಿಲ್ಲ. ಇದರ ಬಗ್ಗೆ ತುಂಬಾ ಆಲೋಚಿಸಬೇಡ, ನಿನ್ನ ಓವರ್​ ಮುಗಿಸು ಮತ್ತು ಆರಾಮವಾಗಿರು ಎಂದು ಧೋನಿ ಭಾಯ್​ ಹೇಳಿದರೆಂದು ಚಹಲ್​ ನೆನಪಿಸಿಕೊಂಡರು.

ಮಾತು ಮುಂದುವರಿಸಿ, ಆ ಸಂದರ್ಭದಲ್ಲಿ ಅಷ್ಟು ರನ್​ ಬಿಟ್ಟುಕೊಟ್ಟಿದ್ದಕ್ಕೆ ನಿಮ್ಮನ್ನು ಯಾರಾದರೂ ಬೈಯ್ದಿದ್ದರೆ, ನಿಮ್ಮ ಆತ್ಮವಿಶ್ವಾಸ ಕುಗ್ಗಿ ಹೋಗುತ್ತಿತ್ತು. ಆದರೆ, ಅವರು (ಧೋನಿ) ಇದೊಂದು ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿಲ್ಲ ಅಷ್ಟೇ.. ಆದರೆ, ಏಕದಿನ ಪಂದ್ಯದಲ್ಲಿ ತುಂಬಾ ಚೆನ್ನಾಗಿ ಮಾಡಿದ್ದೀಯ ಎಂದರು. ಕ್ರಿಕೆಟ್​ನಲ್ಲಿ ಕೆಲವೊಮ್ಮೆ ನೀವು ಉತ್ತಮವಾಗಿ ಬೌಲಿಂಗ್ ಮಾಡಬಹುದು ಮತ್ತು ಕೆಲವೊಮ್ಮೆ ಆಗುವುದಿಲ್ಲ ಎನ್ನುವುದನ್ನು ನಾನು ಅಂದು ಅರ್ಥಮಾಡಿಕೊಂಡೆ ಎಂದು ಚಹಲ್ ತಿಳಿಸಿದ್ದಾರೆ.

ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನದ ಹೊರೆತಾಗಿಯೂ ಪ್ರಸ್ತುತ ಫಾರ್ಮ್​ ಸಮಸ್ಯೆ ಎದುರಿಸುತ್ತಿರುವ ಚಹಲ್​ ಫೆಬ್ರವರಿ 6ರಿಂದ ವಿಂಡೀಸ್ ವಿರುದ್ಧ ನಡೆಯಲಿರುವ ಸೀಮಿತ ಓವರ್​ಗಳ ಸರಣಿಯಲ್ಲಿ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details