ಕರ್ನಾಟಕ

karnataka

ETV Bharat / sports

ಯುವ ಆಟಗಾರ್ತಿಯರು ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ, ವಿಶ್ವಕಪ್​​ನಲ್ಲಿ ಅವರ ಸ್ಥಾನದ ಬಗ್ಗೆ ಖಚಿತತೆ ಇದೆ:ಮಿಥಾಲಿ ರಾಜ್​ - ಶೆಫಾಲಿ ವರ್ಮಾ, ರಿಷಾ ಘೋಷ್

ಭಾರತ ಮಾರ್ಚ್​​ 4ರಿಂದ ಕಿವೀಸ್​ನಲ್ಲಿ ಆರಂಭವಾಗಲಿರುವ ವಿಶ್ವಕಪ್​​ಗೂ ಮುನ್ನ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​​, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗಳಲ್ಲಿ ಕೆಲವು ಹೊಸ ಆಟಗಾರ್ತಿಯರಿಗೆ ಅವಕಾಶ ನೀಡಿದೆ. ಇದರಲ್ಲಿ ಕೆಲವು ಆಟಗಾರ್ತಿಯರು ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದ್ದು, ವಿಶ್ವಕಪ್​​ಗೂ ಮುನ್ನ ಭಾರತ ತಂಡಕ್ಕೆ ಬಲವನ್ನು ತಂದಿದೆ.

Mithali Raj on ODI World Cup
ಮಿಥಾಲಿ ರಾಜ್ ವಿಶ್ವಕಪ್

By

Published : Feb 26, 2022, 8:27 PM IST

ಕ್ರೈಸ್ಟ್​ಚರ್ಚ್​: ಶೆಫಾಲಿ ವರ್ಮಾ, ರಿಚಾ ಘೋಷ್​ ಅಂತಹ ಯುವ ಆಟಗಾರ್ತಿಯರು ದೊಡ್ಡ ಮಟ್ಟದಲ್ಲಿ ಆಡುವುದಕ್ಕೆ ತಾವೂ ಸಮರ್ಥರು ಎಂಬುದನ್ನು ಈಗಾಗಲೇ ತಮ್ಮ ಸಾಮರ್ಥ್ಯದ ಮೂಲಕ ಸಾಬೀತುಪಡಿಸಿದ್ದಾರೆ. ವಿಶ್ವಕಪ್​ಗೂ ಮುನ್ನ ನಡೆದ ಕೆಲವು ಸರಣಿಗಳು ತಂಡದ ಸಂಯೋಜನೆಗೆ ನೆರವಾಗಿದೆ ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ.

ಭಾರತ ಮಾರ್ಚ್​​ 4ರಿಂದ ಕಿವೀಸ್​ನಲ್ಲಿ ಆರಂಭವಾಗಲಿರುವ ವಿಶ್ವಕಪ್​​ಗೂ ಮುನ್ನ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​​, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗಳಲ್ಲಿ ಕೆಲವು ಹೊಸ ಆಟಗಾರ್ತಿಯರಿಗೆ ಅವಕಾಶ ನೀಡಿದೆ. ಇದರಲ್ಲಿ ಕೆಲವು ಆಟಗಾರ್ತಿಯರು ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದ್ದು, ವಿಶ್ವಕಪ್​​ಗೂ ಮುನ್ನ ಭಾರತ ತಂಡಕ್ಕೆ ಬಲವನ್ನು ತಂದಿದೆ.

ಅವರೆಲ್ಲರಿಗೂ ಒಳ್ಳೆಯ ಆವಕಾಶಗಳನ್ನು ನೀಡಲಾಗಿದೆ ಮತ್ತು ಆ ಸರಣಿಗಳು ಯುವ ಆಟಗಾರ್ತಿಯರಿಗೆ ತುಂಬಾ ನೆರವಾಗಿದೆ. ನಾಯಕಿಯಾಗಿ ನಾನು ತಂಡದಲ್ಲಿ ಅವರಿಗೆ ಯಾವ ಕ್ರಮಾಂಕ ಸೂಕ್ತ ಎನ್ನುವುದನ್ನು ಹುಡುಕಬೇಕಿದೆ" ಎಂದು ಮಿಥಾಲಿ ರಾಜ್ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:EXCLUSIVE: ರಷ್ಯಾ ದಾಳಿಯಿಂದ ನನ್ನ ಉಕ್ರೇನ್ ಕೋಚ್ ಪರಿಸ್ಥಿತಿ ಬಗ್ಗೆ ಚಿಂತಿತನಾಗಿದ್ದೇನೆ: ಪ್ಯಾರಾಲಿಂಪಿಯನ್​ ಶರದ್ ಕುಮಾರ್

ನಾವು ಕಳೆದ ಆವೃತ್ತಿಯಿಂದಲೂ ಒಳ್ಳೆಯ ಅನುಭವಿ ಗುಂಪನ್ನು ಹೊಂದಿದ್ದೇವೆ. ಮತ್ತು ಭಾರತ ತಂಡದಲ್ಲಿದ್ದ ಬಹುತೇಕರು, ಅದರಲ್ಲೂ ಯುವ ಆಟಗಾರ್ತಿಯರು ಹಲವಾರು ಲೀಗ್​ಗಳಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಅವುಗಳು ಅವರಿಗೆ ದ್ವಿಪಕ್ಷೀಯ ಸರಣಿಗಿಂತಲೂ ಹೆಚ್ಚಿನ ಮಾನ್ಯತೆಯನ್ನು ಒದಗಿಸಿಕೊಟ್ಟಿವೆ ಎಂದು ಹಿರಿಯ ಆಟಗಾರ್ತಿ ಹೇಳಿದ್ದಾರೆ.

ಮಾತು ಮುಂದುವರಿಸಿ, ನೀವು ವಿಶ್ವಕಪ್​ನಂತಹ ಈವೆಂಟ್​ಗೆ ತೆರಳುವಾಗ ಹೆಚ್ಚಾಗಿ ಒಂದೇ ವರ್ಗದವರ ಮೇಲೆ ಅವಲಂಬಿತರಾಗಿದ್ದರು, ಬದಲಾಗಿ ಯುವ ಆಟಗಾರರು ಮತ್ತು ಅನುಭವಿಗಳ ಮಿಶ್ರಣದಲ್ಲಿ ಹೋಗುವುದು ತಂಡಕ್ಕೆ ಅನುಕೂಲವಾಗಲಿದೆ. ಇನ್ನು ನಾನು ಕೂಡ ಉತ್ತಮ ರನ್​​​​ಗಳಿಸುತ್ತಿರುವುದರಿಂದ ತುಂಬಾ ಖುಷಿಯಿದೆ. ವಿಶ್ವಕಪ್​ನಲ್ಲೂ ಇದನ್ನು ಮುಂದುವರಿಸಲು ನಾನು ಇಷ್ಟಪಡುತ್ತೇನೆ ಎಂದು ಟೀಮ್ ಇಂಡಿಯಾ ನಾಯಕಿ ತಿಳಿಸಿದ್ದಾರೆ.

ಭಾರತ ತಂಡ ಭಾನುವಾರ ದಕ್ರಿಣ ಆಫ್ರಿಕಾ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. ಮಂಗಳವಾರ ವಿಂಡೀಸ್ ವಿರುದ್ಧ 2ನೇ ಅಭ್ಯಾಸ ಪಂದ್ಯವನ್ನಾಡಲಿದೆ. ಮಾರ್ಚ್ 4ರಂದು ವಿಶ್ವಕಪ್​ಗೆ ಚಾಲನೆ ದೊರೆಯಲಿದ್ದು, ಮೊದಲನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೆಣಸಾಡಲಿವೆ. ಮಾರ್ಚ್​ 6ರಂದು ಪಾಕಿಸ್ತಾನದ ವಿರುದ್ಧ ಭಾರತ ತನ್ನ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ:ರಣಜಿ ಟ್ರೋಫಿ: ಮಗಳ ಅಂತ್ಯಕ್ರಿಯೆ ಮುಗಿಸಿ ಬಂದು ಶತಕ ಬಾರಿಸಿದ ಬರೋಡಾ ಕ್ರಿಕೆಟಿಗ

ABOUT THE AUTHOR

...view details