ಭದ್ರಾಚಲಂ/ವಿಶಾಖಪಟ್ಟಣಂ: ಭಾರತೀಯ ಮಹಿಳಾ ಕ್ರಿಕೆಟ್ ಅಂಡರ್ 19 ತಂಡಕ್ಕೆ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಇಬ್ಬರು ಯುವತಿಯರು ಆಯ್ಕೆಯಾಗಿದ್ದಾರೆ. ಗೊಂಗಡಿ ತ್ರಿಷಾ ಮತ್ತು ಶಬನಂ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ತಮ್ಮ ಪೋಷಕರ ಕನಸನ್ನು ನನಸಾಗಿಸಿದ್ದಾರೆ. ಈ ಟಿವಿ ಭಾರತ್ನೊಂದಿಗೆ ಮಾತನಾಡಿದ ಯುವತಿಯರು, ಭಾರತೀಯ ಮಹಿಳಾ ಕ್ರಿಕೆಟ್ ತಂಡ ಸೇರುವ ಕನಸು ತಮ್ಮ ಬಾಲ್ಯದ ಕ್ರಿಕೆಟ್ ಹೋರಾಟದ ಬಗ್ಗೆ ತಿಳಿಸಿದ್ದಾರೆ.
ರೈಟ್ ಹ್ಯಾಂಡೆಟ್ ಬ್ಯಾಟರ್ ಹಾಗೂ ಲೆಗ್ ಸ್ಪಿನರ್ ಆಗಿರುವ ತ್ರಿಷಾ ತೆಲಂಗಾಣದ ಭದ್ರಾಚಲಂನವರಾಗಿದ್ದು, ತಮ್ಮ ಈ ಸಾಧನೆ ಸಂಪೂರ್ಣ ಕ್ರೆಡಿಟ್ ಅನ್ನು ತಂದೆಗೆ ಸಲ್ಲಿಸಿದ್ದಾರೆ. ತ್ರಿಷಾ ತಂದೆ ರಾಮಿರೆಡ್ಡಿ ಭಾರತೀಯ ಹಾಕಿ ತಂಡದ ಪಟುವಾಗಿದ್ದು, ತಾವು ಪಟ್ಟ ಕಷ್ಟ ಮಗಳ ಕ್ರಿಕೆಟ್ ಕನಸಿಗೆ ಅಡ್ಡಿಯಾಗದಂತೆ ನೋಡಿಕೊಂಡಿದ್ದಾರೆ.
ಹುಡುಗಿಯಾಗಿರುವ ನಾನು ಕ್ರಿಕೆಟ್ ಅನ್ನು ವೃತ್ತಿಯನ್ನಾಗಿ ಆರಿಸಿಕೊಳ್ಳತ್ತಿರುವ ಬಗ್ಗೆ ನನ್ನ ತಂದೆಗೆ ಬಹಳಷ್ಟು ಪ್ರಶ್ನೆಗಳು ಎದುರಾದವು. ಆದರೆ, ಅವರು ಅದಕ್ಕೆ ಕೇರ್ ಮಾಡಲಿಲ್ಲ ಎನ್ನುವ ತ್ರಿಷಾ ತಮ್ಮ ಈ ಸಾಧನೆಗೆ ತಾಯಿ ಮಾಧವಿ ಬೆಂಬಲ ಕೂಡ ಅಗಾಧ ಎಂದು ಸ್ಮರಿಸಿಕೊಂಡಿದ್ದಾರೆ.
ನನ್ನ ತಂದೆ ಹಾಕಿ ಕನಸು ನನಸಾಗಿರಲಿಲ್ಲ:ಐಟಿಸಿಯಲ್ಲಿ ಫಿಟ್ನೆಸ್ ಸಮಲೋಚಕರಾಗಿ ಕೆಲಸಮಾಡಿದರೂ ಅವಕಾಶಗಳ ಕೊರತೆಯಿಂದಾಗಿ ನನ್ನ ತಂದೆ ಹಾಕಿ ತಂಡ ಸೇರುವ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ತಲೆಯಲ್ಲಿ ಯಾವಾಗಲೂ ಆಟಗಳದ್ದೇ ಚಿಂತೆ. ಈ ಹಿನ್ನಲೆ ಅವರು ನನ್ನನ್ನು ಚಾಪಿಂಯನ್ ಆಗಿ ನೋಡಬೇಕು ಎಂದು ಬಯಸಿದರು. ನಾನು ಬ್ಯಾಟ್ ಮತ್ತು ಬಾಲ್ ಜೊತೆ ಬಾಲ್ಯ ಕಳೆದೆ. ಕ್ರಮೇಣ ಆಟದ ಮೇಲಿನ ಪ್ರೀತಿ ಹೆಚ್ಚಿತ್ತು. ಇದೇ ಕಾರಣದಿಂದ ನಾನು ಆಟವನ್ನು ಚೆನ್ನಾಗಿ ಆಡುತ್ತೇನೆ ಎಂದರು ತ್ರಿಷಾ.
ನನ್ನ ಉತ್ತಮ ತರಬೇತಿಗಾಗಿ ತಂದೆ ಕೆಲಸ ಬಿಟ್ಟು ಹೈದರಾಬಾದ್ಗೆ ಬಂದೆವು. ಸಮರ್ಪಣಾ ಭಾವದಿಂದ ನಾನು ಆಟವಾಡುತ್ತಿದ್ದು, ಇದರ ಹಿಂದೆ ನನ್ನ ಪೋಷಕರ ತ್ಯಾಗ ಇದೆ ಎಂದರು. ಸದ್ಯ ತ್ರಿಷಾ ಕೋಚಿಂಗ್ ಬಿಯಂಡ್ ಅಕಾಡೆಮಿಯ ಆರ್ ಶ್ರೀಧರ್ ಅವರ ತರಬೇತಿಯಲ್ಲಿ ಆಡುತ್ತಿದ್ದಾರೆ. ನಿತ್ಯ ಬೆಳಗ್ಗೆ 6ಗಂಟೆಗೆ ತಂದೆಯೊಂದಿಗೆ ಪ್ರಾಕ್ಟೀಸ್ ಆರಂಭವಾಗಿ, 7-8 ಗಂಟೆಗಳ ಕಾಲ ತರಬೇತಿ ನಡೆಯುತ್ತದೆ.
ದೊಡ್ಡ ಹೊಡೆತಗಳನ್ನು ಎದುರಿಸಲು ನೀವು ಫಿಟ್ ಆಗಿರಬೇಕು. ನಾನು 50 ಯಾರ್ಡ್ಗಳಲ್ಲಿ ಬಾಲ್ಗಳನ್ನು ಎದುರಿಸುತ್ತೇನೆ. ಆದರೆ, ನಾನು ಈಗ 75 ಯಾರ್ಡ್ಗಳಲ್ಲಿ ಸಿಕ್ಸ್ ಬಾರಿಸಬಲ್ಲೆ ಎನ್ನುತ್ತಾರೆ ತ್ರಿಷಾ. ತ್ರಿಷಾ 8 ವರ್ಷ ವಯಸ್ಸಿನಲ್ಲೇ ರಾಜ್ಯದ ಅಂಡರ್ 16 ಟೀಮ್ನಲ್ಲಿ ಆಟವಾಡಿದ್ದಾರೆ. ತ್ರಿಷಾ ಎಚ್ಸಿಎ ಸೀನಿಯರ್ ಟೀಮ್ ನಿಂದ ಆಯ್ಕೆಯಾಗಿದ್ದು, ಬಿಸಿಸಿಐ ಬೆಸ್ಟ್ ಕ್ರಿಕೆಟರ್ ಪ್ರಶಸ್ತಿ ಪಡೆದಿದ್ದಾರೆ. ಇದರ ಜೊತೆಗೆ 13 ವರ್ಷಗಳ ಕಾಲ ಚಾಲೆಂಜರ್ಸ್ ಟೂರ್ನಿಯಲ್ಲೂ ಭಾಗಿಯಾಗಿದ್ದರು.
ಮಿಥಾಲಿಯಂತೆ ಹೆಚ್ಚಿನ ಸ್ಕೋರ್:ತ್ರಿಷಾ, ಧೋನಿ ಮತ್ತು ಮಿಥಾಲಿ ರಾಜ್ರಂತೆ ಅಂಡರ್ 19 ನಲ್ಲಿ ಅತಿಹೆಚ್ಚು ರನ್-ಸ್ಕೋರ್ ಹೊಂದಿದ್ದಾರೆ. ತ್ರಿಷಾ ಸದ್ಯ ಭಾವನ್ಸ್ ಜ್ಯೂನಿಯರ್ ಕಾಲೇಜಿನಲ್ಲಿ ಎರಡನೇ ವರ್ಷದ ಇಂಟರ್ ಓದುತ್ತಿದ್ದು, ಸ್ವಿಮಿಂಗ್ ಮತ್ತು ಡ್ರಾಯಿಂಗ್ ಹವ್ಯಾಸವನ್ನು ಹೊಂದಿದ್ದಾರೆ.