ಮೊಹಾಲಿ:ರವೀಂದ್ರ ಜಡೇಜಾ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಭಾರತ ತಂಡ ಬೃಹತ್ ಮೊತ್ತ ದಾಖಲಿಸುವುದಕ್ಕೆ ನೆರವಾಗಿದ್ದರು. ಜಡೇಜಾ ಶತಕ ಸಿಡಿಸುತ್ತಿದ್ದಂತೆ ಅಭಿಮಾನಿಗಳು ತಮ್ಮನ್ನು ರಾಕ್ಸ್ಟಾರ್ ಎಂದು ದಶಕದ ಹಿಂದೆ ಗುರುತಿಸಿದ್ದ ಶೇನ್ ವಾರ್ನ್ಗೆ ದೊಡ್ಡ ಗೌರವ ಅರ್ಪಿಸಿದ್ದೀರಾ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಉದ್ಘಾಟನಾ ಆವೃತ್ತಿಯ ವೇಳೆ ಆಗಷ್ಟೇ ಅಂಡರ್ 19 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಜಡೇಜಾರನ್ನು ರಾಜಸ್ಥಾನ್ ರಾಯಲ್ಸ್ ಖರೀದಿಸಿತ್ತು. ಆ ಆವೃತ್ತಿಯಲ್ಲಿ ಶೇನ್ ವಾರ್ನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು. ಆ ವೇಳೆಗಾಗಲೇ ಕ್ರಿಕೆಟ್ ಲೋಕದ ಸ್ಪಿನ್ ದಂತಕತೆಯಾಗಿ ಗುರುತಿಸಿಕೊಂಡಿದ್ದ ಶೇನ್ ವಾರ್ನ್ ಭಾರತೀಯ ಯುವ ಆಲ್ರೌಂಡರ್ ಸಾಮರ್ಥ್ಯವನ್ನು ಮೆಚ್ಚಿ, ಆತನಿಗೆ ರಾಕ್ಸ್ಟಾರ್ ಎಂದು ಅಡ್ಡ ಹೆಸರನ್ನಿಟ್ಟಿದ್ದರು.(ಈ ವಿಚಾರವನ್ನು ಅವರ ಆತ್ಮಕಥನ ನೊ ಸ್ಪಿನ್ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ).